Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ.

ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ.



Author : Vinayak M Bhat

ಕೇಂದ್ರ ಸಂಸದರಿಂದ 110ಕೋಟಿ ಕಾಮಗಾರಿಗಳ ವೀಕ್ಷಣೆ.

ನೀವು ಆಶೀರ್ವದಿಸಿದ್ದರಿಂದ ಮೋದಿಜಿ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ ಎಂದು  ಕೇಂದ್ರ ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಖಾತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಂಸದ ಪ್ರಲ್ಹಾದ ಜೋಶಿ ಹೇಳಿದರು.

ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಮಕ್ಕಳಿಗೆ ಸಮವಸ್ತ್ರವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತತವಾಗಿ ಆಶೀರ್ವಾದ ಮಾಡಿದ ಗ್ರಾಮಗಳಲ್ಲಿ ಇದೂ ಒಂದು ನಿಮ್ಮೆಲ್ಲರ ಸಹಕಾರದಿಂದ ನಿಮ್ಮ ಸೇವೆ ಹಾಗೂ ದೇಶದ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದೀರಿ, ರಾಜ್ಯ ಸರಕಾರ ಮಾಡುವ ಅಭಿವೃದ್ಧಿ ಕಾಮಗಾರಿಗಳನ್ನು ನಾವು ಮಾಡುತ್ತಾ ಇದ್ದೇವೆ, ನಾನೂ ಕನ್ನಡ ಶಾಲೆಯಲ್ಲಿಯೇ ಕಲಿತ ವಿದ್ಯಾರ್ಥಿ, ಶಾಲೆಗಳ ಅಭಿವೃದ್ಧಿಗೋಸ್ಕರ ನನ್ನನ್ನು ಯಾವದೇ ಸಂಧರ್ಭದಲ್ಲಿ ಸಂಪರ್ಕಿಸಿರಿ, ದೇಶದ ಜವಾಬ್ದಾರಿ ಇರುವದರಿಂದ ಕ್ಷೇತ್ರಕ್ಕೆ ಬರಲು ಆಗಿಲ್ಲ ಆದರೆ ಅಭಿವೃದ್ಧಿ ನಿಲ್ಲಿಸೋಲ್ಲ, ಕಾಂಗ್ರೆಸ್ ಸರಕಾರಕ್ಕೆ ಏನೇ ಕೇಳಿದರೂ ದುಡ್ಡಿಲ್ಲಎನ್ನುತ್ತಾರೆ,  ಬಡವರಿಗೆ ಅಕ್ಕಿಕೊಡುವದು ಮೋದಿ ಸರಕಾರ ನಾವು ಕೊಟ್ಟಿದ್ದೇವೆ ಎಂದು ಪ್ರಚಾರ ಪಡೆಯುತ್ತಾರೆ ಇವರಷ್ಟು ಸುಳ್ಳು ಹೇಳುವವರನ್ನು ನಾ ನೋಡಿಯೇ ಇಲ್ಲಾ ಎಂದರು.ಮಾಜಿ ಎಂ ಎಲ್ ಸಿ. ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಮಾತನಾಡಿ ಜೋಶಿಯವರು ನಮ್ಮೆಲ್ಲರ ನೆಚ್ಚಿನ ನಾಯಕರಾಗಿದ್ದಾರೆ, ಗ್ರಾಮಗಳ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ, ಸರಕಾರದ ಅಧಿಕಾರ ಬದಲಾದರೂ ನಮ್ಮ ಕ್ಷೇತ್ರದ ಶಾಸಕರು ಕ್ಷೇತ್ರದ ಮತ್ತು ರೈತರ ಅಭಿವೃದ್ಧಿ ನೋಡದೇ ಅಧಿಕಾರಕ್ಕಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಇತ್ತ ಸುಳಿಯಿತ್ತಿಲ್ಲ, ಆದರೆ ನಮ್ಮೆಲ್ಲರ ಹೆಮ್ಮೆಯ ಜೋಶಿ ಯವರು ಈ ಕ್ಷೇತ್ರಕ್ಕೆ ಸುಮಾರು 110ಕೋಟಿ ಅನುದಾನ ಕೊಟ್ಟಿದ್ದಾರೆ ಅವರಿಗೆ ನಿಮ್ಮೆಲ್ಲರ ವತಿಯಿಂದ ಧನ್ಯವಾದ ಎಂದರು.

ಈ ಸಂಧರ್ಭದಲ್ಲಿ ತಾ.ಪಂ.ಇ. ಒ.ಪರಶುರಾಮ ಸಾವಂತ, ತಹಸೀಲ್ದಾರ್ ಬಸವರಾಜ ಹೊಂಕಣದವರ,ಕಿರಣ ಪಾಟೀಲ ಕುಲಕರ್ಣಿ, ಮದನ ಕುಲಕರ್ಣಿ,ಬಿಜೆಪಿ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕ್ ಅಧ್ಯಕ್ಷ ಎಲ್ಲಾರಿ ಶಿಂದೆ, ಬಸವರಾಜ್ ಶರೇವಾಡ, ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿ ಅಣ್ಣಪ್ಪ ಓಲೆಕಾರ್, ಆನಂದ್ ಕಡ್ಲಾಸ್ಕರ್, ಗೀತಾ ಮರಲಿಂಗಣ್ಣನವರ್, ಮಾಲಾ ಗೋಕುಲ್, ವಿಜಯಲಕ್ಷ್ಮಿ ಆಡಿನವರ್, ಅರ್ಜುನ ಲಮಾಣಿ, ಮಾಜಿ ಜಿ ಪಂ ಸಿ ಎಫ್ ಪಾಟೀಲ್, ಶಂಕ್ರಪ್ಪ ಧಣಿಗೊಂಡ್ ಶಿವರುದ್ರಪ್ಪ ಗೋಕುಲ್ ಸಂತೋಷ್ ಮದನಬಾವಿ ಮಾಜಿ ಗ್ರಾಪಂ ಸದಸ್ಯ ವಿನಾಯಕ್ ಧನಿಗೊಂಡ್ ನಿಂಗಪ್ಪ ಪತ್ರಿಕೆ ಗಿಡದ ಚನ್ನಬಸಪ್ಪ ಶಿಗ್ಗಟ್ಟಿ ರೇಣುಕಾ ಬಿಸರಳ್ಳಿ ಗುರು ಹರಿಜನ್ ರಾಚಪ್ಪ ಬಿಸರಳ್ಳಿ  ತಾಲೂಕ ಬಿಜೆಪಿ ಮುಖಂಡರು ಊರ ಗ್ರಾಮಸ್ಥರು ಉಪಸ್ಥಿತರಿದ್ದರು.