Image
Breaking News
• ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ. • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
11 Sep 2026 | 
ಬೇಲಿಯೇ ಎದ್ದು ಹೊಲ ಮೇದಂತಾಗಿದೆ :ನಾಗರಾಜ ಛಬ್ಬಿ.

ಬೇಲಿಯೇ ಎದ್ದು ಹೊಲ ಮೇದಂತಾಗಿದೆ :ನಾಗರಾಜ ಛಬ್ಬಿ.



Author : Vinayak M Bhat

ಬೇಲಿಯೇ ಎದ್ದು ಹೊಲ ಮೇದಂತಾಗಿದೆ ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಭಾರತಿಯ ಕಿಸಾನ್ ಸಂಘ ಹಾಗೂ ವಿವಿಧ ರೈತ ಸಂಘಗಳಿಂದ  ರೈತರ ಬೆಳೆ ವಿಮೆಯಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ  ನಿರಂತರ ನಡೆಯುತ್ತಿರುವ ಶಾಂತಿಯುತ ಹೋರಾಟದಲ್ಲಿ ಮಾತನಾಡಿದರು. ರೈತರಿಗೆ ಅನ್ಯಾಯವಾದರೆ ನಾನು ಸಹಿಸುವದಿಲ್ಲ ಈಗಾಗಲೇ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಈ ಕುರಿತು ಮಾತನಾಡಿದ್ದೇನೆ, ರೈತರ ಇಂತಹ ದುರ್ಗತಿಗೆ ಯಾರು ಹೊಣೆ?ಮಾನ್ಯಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಘಟನೆಗಳು ಸಂಭವಿಸಿದ್ದರೂ ತಪ್ಪಿತಸ್ತರ ಮೇಲೆ ಯಾಕೆ ಇನ್ನೂ ಕ್ರಮ ಜರುಗಿಸಿಲ್ಲ?ಸೌಜನ್ಯಕ್ಕಾದರೂ ಇನ್ನೂ ಪ್ರತಿಭಟನೆ ನಿರತ ರೈತರನ್ನು ಭೇಟಿ ಮಾಡಿಲ್ಲ.ತಾವು ಖುದ್ದಾಗಿ ಬಂದು ತಪ್ಪಿತಸ್ತರ ಮೇಲೆ ಕಠಿಣ ಕ್ರಮ ಜರುಗಿಸಿರಿ ,ಇದೇ ರೀತಿ ಮುಂದುವರೆದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ, ಇದಕ್ಕೆ ಅವಕಾಶ ಕೊಡಬೇಡಿ, ಈ ಹಿಂದೆ ನಮ್ಮ ಜಿಲ್ಲೆಯ ನವಲಗುಂದ ಮತ್ತು ಕುಂದಗೋಳ ತಾಲೂಕುಗಳಲ್ಲಿ ಇದೇ ರೀತಿ ಆಗಿತ್ತು, ಆಗ ತಪ್ಪಿತಸ್ತರ ಮೇಲೆ ಕ್ರಮ ಕೈಗೊಂಡಿದ್ದರೆ ಇದು ಮರುಕಳಿಸುತ್ತ ಇರಲಿಲ್ಲಎಂದರು.
ಈ ಸಂಧರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗುರುನಾಥಗೌಡ್ರು ಬಸನಗೌಡ್ರ, ಬಿಜೆಪಿ ಮುಖಂಡ ಕಿರಣ ಪಾಟೀಲ, ಮಾಜಿ ಜಿಪಂ ಸದಸ್ಯ ಐ ಸಿ ಗೋಕುಲ,  ಫಕ್ಕಿರೇಶ ನೆಸ್ರೇಕರ,ಶಶಿಧರ ಹೂಲಿಕಟ್ಟಿ, ಸದಾನಂದ ಚಿಂತಾಮಣಿ,ಚಂದ್ರಗೌಡ ಪಾಟೀಲ,ಈಶ್ವರ ಜಾಯನಗೌಡ್ರು, ಪರಶುರಾಮ ಹುಲಿಹೊಂಡ, ಕಲ್ಲಪ್ಪ ಪುಟ್ಟಪ್ಪನವರ,ಮಂಜುನಾಥ ಮಾಳಗಿ, ಆನಂದ ಕಡ್ಲಾಸ್ಕರ,  ರೈತವರ್ಗ ಉಪಸ್ಥಿತರಿದ್ದರು.