Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ತಂದೆ ತಾಯಿಗೆ , ಕಲಿತ ಶಾಲೆಗೆ, ಹುಟ್ಟಿದ ಊರಿಗೆ ಕೀರ್ತಿ ತರಬೇಕು :ಅಬ್ದುಲ್ ರಜಾಕ್ ಮನಿಯಾರ್.

ತಂದೆ ತಾಯಿಗೆ , ಕಲಿತ ಶಾಲೆಗೆ, ಹುಟ್ಟಿದ ಊರಿಗೆ ಕೀರ್ತಿ ತರಬೇಕು :ಅಬ್ದುಲ್ ರಜಾಕ್ ಮನಿಯಾರ್.



Author : Vinayak M Bhat

ಎಲ್ಲರೂ ತಂದೆ ತಾಯಿಗೆ, ಕಲಿತ ಶಾಲೆಗೆ, ಹುಟ್ಟಿದ ಊರಿಗೆ ಕೀರ್ತಿ ತರಬೇಕು ಎಂದು ಬಮ್ಮಿಗಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ರಜಾಕ್ ಮನಿಯಾರ್ ಹೇಳಿದರು.  

ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026-27ರ ಕಾಲೇಜಿನ ಸಂಸತ್ತು, ಕ್ರೀಡೆ, ಸಾಂಸ್ಕೃತಿಕ ಮತ್ತು ಪಠ್ಯ - ಪಠ್ಯತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇದು ಸ್ಪರ್ಧಾತ್ಮಕ ಯುಗ ಮತ್ತು ಡಿಜಿಟಲ್ ಮಾಧ್ಯಮದ ಯುಗ, ಇವುಗಳ ಮೂಲಕ ಕಲಿಕೆಯನ್ನು ಸರಳೀಕೃತ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ ಎಂದರು, ಉತ್ತಮ ಫಲಿತಾಂಶ ಪಡೆಯಿರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದ ಪ್ರಭಾರಿ ಪ್ರಾಚಾರ್ಯರಾದ ಮಂಜುನಾಥ ಮೇಟಿ ನಮ್ಮ ಕಾಲೇಜಿನಲ್ಲಿಯೇ ಯು. ಪಿ. ಎಸ್. ಸಿ. ಪೊಲೀಸ ಮತ್ತು  ಅಗ್ನಿವೀರ ಪರೀಕ್ಷೆಗಳನ್ನು ನಡೆಸುತ್ತೇವೆ.ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವದಲ್ಲದೆ ಭಾರತದ ಉತ್ತಮ ಪ್ರಜೆಗಳಾಗಿರಿ, ಇಂದು ಆಯ್ಕೆ ಆದ ಎಲ್ಲ ಸಂಸತ್ ಪ್ರತಿನಿಧಿಗಳುತಾವೂ ಮಾದರಿ ಆಗಿ ಇತರರಿಗೂ ಮಾದರಿ ಆಗಿರಿ ಎಂದರು.

ಈ ಸಂಧರ್ಭದಲ್ಲಿ ಕಾಲೇಜು ಸುಧಾರಣಾ ಸಮೀತಿ ಉಪಾಧ್ಯಕ್ಷ ಮಹೇಶ ಲಕ್ಕಣ್ಣವರ ಉಪ ಪ್ರಾಂಶುಪಾಲ ರಂಗಯ್ಯ ಸಂಗೇದೇವರಕೊಪ್ಪ ಉಪಸ್ಥಿತರಿದ್ದರು. ಅನಿಲ್ ಕೆ ಪ್ರಮಾಣ ವಚನ ಬೋಧಿಸಿದರು,ಶ್ವೇತಾ ನಾಯಕ ಸ್ವಾಗತಿಸಿದರು, ಆಶಾ ಜ್ಯೋತಿ ವಂದನಾರ್ಪಣೆ ಮಾಡಿದರು, ಕುಮಾರಿ ಸುಕನ್ಯಾ ನಿರೂಪಣೆ ಮಾಡಿದರು. ಕಾಲೇಜಿನ ಎಲ್ಲ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.