Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ.

ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ.



Author : Vinayak M Bhat

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವತಿಯಿಂದ ನೀಡುವ 2025-26ನೇ ಸಾಲಿನ ಹೊಸ ದಿಗಂತ ಪತ್ರಿಕೆಯ ತಾಲೂಕ ವರದಿಗಾರರಾದ ಗಿರೀಶ ಮುಕ್ಕಲ್ಲ ಅವರಿಗೆ ಅತುತ್ತಮ ತನಿಖಾ ವರದಿಯ ಪ್ರಶಸ್ತಿ ಲಭಿಸಿದೆ.

ಕಿರು ಪರಿಚಯ::

ಸರಸ್ವತಿ ಆರಾಧಕ ಕಲಘಟಗಿ ಶರಣ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಆಗಿರುವ ಇವರು ಮುಲತಃ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದವರಾಗಿದ್ದು ಕಳೆದ 9 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಇರುವ ಉದಯವಾಣಿ, ಪ್ರಜಾವಾಣಿ ದಿನಪತ್ರಿಕೆ ಗಳಲ್ಲಿ ಸೇವೆ ಸಲ್ಲಿಸಿ ಈಗ ''ಹೊಸ ದಿಗಂತ "ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಸಮಾಜ ಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ, ಡಿಪ್ಲೋಮ ಇನ್ ಕೊ. ಆಪರೇಟಿವ್ ಮ್ಯಾನೇಜ್ ಮೆಂಟ್ ಪದವಿ ಪಡೆದಿರುವ ಇವರು ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ 6ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಗೌರವದ, ಮೌಲ್ಯಗಳನ್ನು ಎತ್ತಿ ಹಿಡಿದ ಸಮಾಜಮುಖಿವ್ಯಕ್ತಿಯಾಗಿದ್ದಾರೆ. ರಾಯಣ್ಣ ಹಿತರಕ್ಷಣಾ ಸಮೀತಿಯು ಕೊಡುವ 2026ರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪಡೆದಿದ್ದಾರೆ. ಅನೇಕ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ 

ಬಿ. ನ್ಯೂಸ್.ಹಬ್. ನ ಸಿ ಇ. ಒ ವಿನಾಯಕ ಭಟ್ ಅವರಿಗೆ ನೀಡಿದ ಸಂದರ್ಶನದಲ್ಲಿ ಕನ್ನಡ ಉಳಿಯಬೇಕು, ಕನ್ನಡ ಬೆಳೆಯಬೇಕು,ಪ್ರಶಸ್ತಿ ಲಭಿಸಿದ್ದು ತುಂಬಾ ಸಂತೋಷವಾಗಿದೆ,ಇಂತಹ ಪ್ರಶಸ್ತಿಗಳಿಂದ ನಮ್ಮ ಮೌಲ್ಯಗಳನ್ನು, ಜವಾಬ್ದಾರಿಯನ್ನು ಹೆಚ್ಚಿಸುತ್ತವೆ,ಆಯ್ಕೆ ಮಾಡಿದ ಕಮೀಟೀಗೂ,ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘದ ಪದಾಧಿಕಾರಿಗಳಿಗೆ, ಕಲಘಟಗಿ ತಾಲೂಕ ಕಾರ್ಯನಿರತ ಪತ್ರಕರ್ತರಸದಸ್ಯರಿಗೆ,ಅಭಿನಂದಿಸಿದ ಎಲ್ಲ ಅಭಿಮಾನಿ ಬಳಗಕ್ಕೂ ಧನ್ಯವಾದ ತಿಳಿಸಿದ್ದಾರೆ.