Image
Breaking News
• ಕಲಘಟಗಿ-75 ಕ್ಷೇತ್ರದ ಶಾಸಕ ಸನ್ಮಾನ್ಯ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ. • ಅಂಗನವಾಡಿ ಕಾರ್ಯಕರ್ತೆಯರು ಪಡೆದ ತಾಯಂದಿರು ::ಎಂ. ಜಿ. ಭಟ್ಟ. • ಬೈಕ್ ಅಪಘಾತ 21ವರ್ಷದ ಯುವಕ ಭರತ್ ದುರ್ಮರಣ.
13 Jun 2026 | 
ಕಲಘಟಗಿ-75 ಕ್ಷೇತ್ರದ ಶಾಸಕ ಸನ್ಮಾನ್ಯ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ.

ಕಲಘಟಗಿ-75 ಕ್ಷೇತ್ರದ ಶಾಸಕ ಸನ್ಮಾನ್ಯ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ.



Author : Vinayak M Bhat

ಕಲಘಟಗಿ ತಾಲೂಕ ಮರಾಠಾ ಸಮಾಜದ ವತಿಯಿಂದ ಬಡವರ ಬಂಧು, ಅಭಿವೃದ್ಧಿ ಹರಿಕಾರ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿದರು.ಮುಖಂಡ ಬಾಬಣ್ಣ ಅಂಚಟಗೇರಿ ಮಾತನಾಡಿ ಮಾನ್ಯರು ನಮ್ಮ ಕ್ಷೇತ್ರಕ್ಕೆ ಹಾಗೂ ಕರ್ನಾಟಕ ಸರಕಾರ ತಮಗೆ ನೀಡಿದ ಖಾತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಕ್ಷೇತ್ರದಲ್ಲಿ ನಿರಂತರವಾಗಿಆರೋಗ್ಯ ಸೇವೆ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಇತ್ಯಾದಿಗಳನ್ನು ಮಾಡುತ್ತಲೇ ಇದ್ದಾರೆ,ಇಂತಹ ಅನುಭವ ಹೊಂದಿದ ಮಾನ್ಯ ಲಾಡ್ ಅವರಿಗೆ ಉಪಮುಖ್ಯ ಮಂತ್ರಿ ಸ್ಥಾನ ನೀಡಲು ಆಗ್ರಹಿಸುತ್ತಿದ್ದೇವೆ ಎಂದರು.ಅಧ್ಯಕ್ಷ ತೆ ವಹಿಸಿ ಮಾತನಾಡಿದ ಶಂಕರಗೌಡ ಬಾವನವರ ಮಾನ್ಯ ಲಾಡ್ ಸಾಹೇಬ್ರು ಅವಿರತ ರಾಜಕಾರಿಣಿ, ಆಡುವ ಮಾತಿಗಿಂತ ಮಾಡಿ ತೋರಿಸಿದ್ದಾರೆ ವಿಶೇಷವಾಗಿ ಅಸಹಾಯಕರ ಬಡವರ ಧ್ವನಿ ಆಗಿದ್ದಾರೆ, ಕ್ಷೇತ್ರದ ಹೊರತಾಗಿಯೂ ಸಾವಿರಾರು ಬಡ ವಿದ್ಯಾರ್ಥಿಗಳಿಗೆ  ಉನ್ನತ,ಉಚಿತ ಶಿಕ್ಷಣ ಕೊಟ್ಟು ಎಷ್ಟೋ ಕುಟುಂಬಗಳಿಗೆ ದಾರಿ ದೀಪ ಆಗಿದ್ದಾರೆ, ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್, ಹೈ ಕಮಾಂಡ್ ನ ಮಾನ್ಯ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾನ್ಯ ಲಾಡ್ ಅವರಿಗೆಉಪಮುಖ್ಯಮಂತ್ರಿ ಸ್ಥಾನ ನೀಡಲು ಒತ್ತಾಯಿಸುತ್ತಿದ್ದೇವೆ ಎಂದರು.ಸಮಾಜದ ಮುಖಂಡರಾದ ಸದಾನಂದ ಪವಾರ, ಸಾತಪ್ಪ ಕುಂಕೂರ ಮಾತನಾಡಿದರು.ಪಟ್ಟಣದ ಎ ಪಿ ಎಂ ಸಿ ಯಿಂದ ಬಮ್ಮಿಗಟ್ಟಿ ಕ್ರಾಸ್ ವರೆಗೆ ಮೆರವಣಿಗೆ ಮೂಲಕ ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹಿಸಿದರು.

ಸಮಾಜದ ಮುಖಂಡರಾದ ಪಾಂಡುರಂಗ ರಾಮಜೀ, ಸಂಗಪ್ಪ ಕಾನೋಜಿ, ಹನಮಂತ ಚೌರಗುಡ್ಡ, ಮಾರುತಿ ತಹಸೀಲ್ದಾರ್ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.