ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
Author : Vinayak M Bhat
ಖ್ಯಾತ ಹಿನ್ನೆಲೆ ಗಾಯಕಿ ಡಾ. ಎಸ್ ಜಾನಕಿ ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಜಾನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ ಹೇಳಿದರು.
ಪಟ್ಟಣದ ಆಂಜನೇಯ ವೃತ್ತದ ಬಳಿ ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶ ಕಂಡಂತಹ ಅದ್ಭುತ ಗಾಯಕರ ಸಾಲಿಗೆ ಎಸ್ ಜಾನಕಿಯವರೂ ಒಬ್ಬರು,ಅನೇಕ ಭಾಷೆಗಳಲ್ಲಿ 48000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಕಲಾವಿಧರಿಗೆ ಸಾವಿಲ್ಲ, ಇಂತಹ ಅದ್ಭುತ ಕಲಾವಿಧೆಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡ ಕ. ರ. ವೇ ಅಧ್ಯಕ್ಷ ಶಂಕರಗೌಡ ಬಾವಿಕಟ್ಟಿಹಾಗೂ ಅವರ ಬಳಗಕ್ಕೆ ನಮ್ಮ ತಾಲೂಕಿನ ವತಿಯಿಂದ ಧನ್ಯವಾದಗಳು ಎಂದರು.ಒಂದು ನಿಮಿಷ ಮೌನಾಚರಣೆ ಮಾಡಿದರು.
ಈ ಸಂಧರ್ಭದಲ್ಲಿ ಶಿವಣ್ಣ ಅದರಗುಂಚಿ, ಗುರುನಾಥಗೌಡ್ರು ಬಸನಗೌಡ್ರು, ಬಸವರಾಜ ತಿಪ್ಪಣ್ಣವರ, ಗದಿಗೆಯ್ಯ ಹಿರೇಮಠ, ದೊಡ್ಡೇಶ ಹಂಗಾರಕಿ, ಶಿವಾಜಿ ವಸ್ತ್ರದ, ನಾಮದೇವ ವಡ್ಡರ, ತಿರಕಯ್ಯ ಹಿರೇಮಠ, ನಾಗಯ್ಯ ತೆಗೂರಮಠ, ಹನಮಂತ ಕಾಳೆ, ಮಲ್ಲಿಕಾರ್ಜುನ ಹಿರೇಮಠ, ಆದರ್ಶ ಮುಗಣ್ಣವರ ಮುಂತಾದವರು ಉಪಸ್ಥಿತರಿದ್ದರು.














