ನಕಲಿ ಪತ್ರಕರ್ತರ ಹಾವಳಿತಡೆಯಲು :ಕಲಘಟಗಿ ಕಾರ್ಯನಿರತ ಪತ್ರಕರ್ತರಿಂದ ಮನವಿ.
Author : Vinayak M Bhat
ತಾಲೂಕಿನಲ್ಲಿ ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕಲಘಟಗಿ ಪೊಲೀಸ್ ಠಾಣೆ ಸಿ ಪಿ ಐ ಶ್ರೀಶೈಲ ಕೌಜಲಗಿ ಅವರಿಗೆ ಮನವಿ ಅರ್ಪಿಸಿದರು.
ತಾಲೂಕಿನಲ್ಲಿ ಇದರಿಂದ ಕಾನಿಪ ಸಂಘದ ವರದಿಗಾರರಿಗೂ ತೊಂದರೆ ಆಗುತ್ತಿದೆ, ಪರಿಶೀಲನೆ ವೇಳೆ ನಕಲಿ ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಈ ಸಂಧರ್ಭದಲ್ಲಿಕಲಘಟಗಿ ಕಾನಿಪ ಅಧ್ಯಕ್ಷ ಪ್ರಕಾಶ ಲಮಾಣಿ, ಉಪಾಧ್ಯಕ್ಷ ಶಶಿಧರ ಕಟ್ಟಿಮನಿ, ಕಾರ್ಯದರ್ಶಿ ಉದಯಕುಮಾರ ಗೌಡರ, ಖಜಾಂಚಿ ವೀರೇಶ ಹಾರೂಗೇರಿ, ಜಿಲ್ಲಾ ಕಾರ್ಯಕಾರಿಣಿ ಕಮೀಟಿ ಸದಸ್ಯ ಕಲ್ಲಪ್ಪ ಮಿರ್ಜಿ, ರಮೇಶ ಸೋಲಾರಾಗೊಪ್ಪ, ಗಿರೀಶ ಮುಕ್ಕಲ,ರವಿ ಬಡಿಗೇರ, ಉಮೇಶ ಜೋಶಿ,ವಿನಾಯಕ ಭಟ್ಟ,ಸುಭಾಸ ಸುಣಗಾರ, ಶಂಕರಗುರು ರಬಕವಿ, ಶಂಕರ ರೆಡ್ಡೆರ, ಸುನಿಲ ಕಮ್ಮಾರ,ಉಪಸ್ಥಿತರಿದ್ದರು.














