Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ಒಂದು ಮತ ಒಂದು ಗುರುತು :ಎ. ಆರ್. ಒ. ಮೊಹಮ್ಮದ್ ಕೇಜಾರ್. ಮತದಾರ ಪರಿಷ್ಕರಣೆ  -2026 ಜಾಗ್ರತಿ ಪಥ ಸಂಚಲನ.

ಒಂದು ಮತ ಒಂದು ಗುರುತು :ಎ. ಆರ್. ಒ. ಮೊಹಮ್ಮದ್ ಕೇಜಾರ್. ಮತದಾರ ಪರಿಷ್ಕರಣೆ  -2026 ಜಾಗ್ರತಿ ಪಥ ಸಂಚಲನ.



Author : Vinayak M Bhat

ಕಲಘಟಗಿ ಪಟ್ಟಣದ ಪಟ್ಟಣ ಪಂಚಾಯತಿ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಧಾರವಾಡ, ತಾಲೂಕು ಸ್ವಿಪ್ ಸಮೀತಿ,ತಾಲೂಕು ಪಂಚಾಯತಿ, ಕಂದಾಯ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ- 2026 ಜಾಗ್ರತಿ ಪಥ ಸಂಚಲನ ಜ್ಯಾತಾ ನೆರವೇರಿತು. ಎ.ಆರ್.ಒ ಮೊಹಮ್ಮದ್ ಕೇಜಾರ್ ಉದ್ಘಾಟಿಸಿ ಒಂದು ಮತ ಒಂದು ಗುರುತು ಮತದಾರರ ಪಟ್ಟಿ ಪರೀಕ್ಷಣೆಯು ದೋಷ ರಹಿತವಾಗಿರುತ್ತದೆ, ದೇಶದ ಪ್ರಜಾಪ್ರಭುತ್ವ ವನ್ನು ಬಲಪಡಿಸುತ್ತದೆ, ಇದನ್ನು ನಾಗರಿಕರಲ್ಲಿ ಜಾಗ್ರತಿ ಮೂಡಿಸುವುದು, ಸಹಕರಿಸುವದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ ಎಂದರು. ಗಣತಿ ನಮೂನೆಯನ್ನು ವಿತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.


ಈ ಸಂಧರ್ಭದಲ್ಲಿ ಪ ಪಂ ಮುಖ್ಯಾಧಿಕಾರಿ ಚಂದ್ರಶೇಖರ. ಬಿ., ತಾಲೂಕ ತಹಶೀಲ್ದಾರ್ ಬಸವರಾಜ ಹೊಂಕಣದವರ,ಗ್ರಾ.ಉ.ಸಹಾಯಕ ಗಿರೀಶ ಕೋರಿ,ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಸಜ್ಜನ, ಕಂದಾಯ ನಿರೀಕ್ಷಕಿ ಶಿವಲೀಲಾ,ಜೆ ಇ. ಕಾಲೇಜಿನ ಪ್ರಾಚಾರ್ಯೆ ಶಾರದಾ ಹಾದಿಮನಿ, ಪೊಲೀಸ್ ಇಲಾಖೆ ಸಿಬ್ಬಂದಿ, ಉಪನ್ಯಾಸಕ ಪ್ರೊ. ಬೂದನೂರ, ಶಾಂತಿ ಮೇರಿ, ಶೃತಿ ಮೇಟಿ, ರೇಣುಕಾ ಬಳಿಗೇರ ಸರೋಜಿನಿ ಮುಗಳಕೋಡ, ಲೀಲಾವತಿ ಬೇರುಡಗಿ, ಪ ಪಂ ಸಿಬ್ಬಂದಿ, 200 ಕ್ಕೂ ಹೆಚ್ಚು ಕಾಲೇಜ ವಿದ್ಯಾರ್ಥಿಗಳು, ಮುಂತಾದವರು ಉಪಸ್ಥಿತರಿದ್ದರು.

ಸಮುದಾಯ ಸಂಘಟಕ ಶರಣಪ್ಪ ಉಣಕಲ್ಲ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿವಿ ಜಿ ಅಂಗಡಿ, ಸಂತೋಷ ಕಟ್ಟಿಮನಿ, ಗುರುಪಾದ ಸೊಬರದ, ವಿದ್ಯಾರ್ಥಿಗಳು ಮುಂತಾದವರ ನೇತೃತ್ವದಲ್ಲಿ ಜಾಗ್ರತಿ ಜ್ಯಾತಾ ಮಾಡಿದರು.