ಗಂಜೀಗಟ್ಟಿ ಗ್ರಾಮದಲ್ಲಿ ಹಿಂದೂ ಮುಸಲ್ಮಾನ ಬಾಂಧವರ ಭಾವೈಕ್ಯತೆಯ ಮೊಹರಂ.
Author : Vinayak M Bhat
ಡೋಲಿ ಮತ್ತು ಪಂಜು ಮೆರವಣಿಗೆಯಲ್ಲಿ ಗಮನ ಸೆಳೆದ 50 ವರ್ಷ ಮೀರಿದವರಿಂದ ಕೋಲಾಟ, ಮಕ್ಕಳಿಂದ ಹೆಜ್ಜೆ ಕುಣಿತ.

ಮೊಹರಂ ಹಬ್ಬವು ಇತಿಹಾಸದಲ್ಲಿ ಹಿಂದೂ ಮುಸಲ್ಮಾನ ಬಾಂಧವರ ಭಾವೈಕ್ಯತೆ ಸಾರುವ ಹಬ್ಬವಾಗಿದೆ, ಈ ಸಂಧರ್ಭದಲ್ಲಿ ಮಾತನಾಡಿದ ನ್ಯಾಯವಾದಿ ನಿಂಗಪ್ಪ ಮುತ್ತಣ್ಣವರ ಜಾತಿ ಮತಗಳ ಭೇಧ ಮರೆತು ಎಲ್ಲರೂ ಬೆರೆತು ಸಮರಸದಿಂದ ಆಚರಿಸುವ ಹಬ್ಬ ಆಗಿದೆ. ಭಾರತ ದೇಶದ ಈ ಸಂದೇಶವು ಪ್ರಪಂಚಕ್ಕೆ ಮಾದರಿ ಆಗಲಿ ಎಂದರು.

ಚಾಲನೆ ಸಂಧರ್ಭದಲ್ಲಿ ಮಾಜಿ ತಾ. ಪಂ. ಅಧ್ಯಕ್ಷ ಭೀಮಣ್ಣ ಗಾಣಿಗೇರ, ಮಲ್ಲಪ್ಪ ಶೀಗಿಗಟ್ಟಿ, ನಿಂಗಯ್ಯ ಕುರ್ಡಿಕೇರಿ, ಮಂಜುನಾಥ ಧಾರವಾಡ, ನಿಂಗಪ್ಪ ಮುತ್ತಣ್ಣವರ, ಕುಮಾರ ಗಾಣಿಗೇರ, ಇಮಾಮ್ ಸಾಬ್ ವಾಲಿಕಾರ, ಖಾದಾರಸಾಬ ವಾಲಿಕಾರ, ಹಾಗೂ ಎಲ್ಲಾ ಗ್ರಾಮಸ್ಥರು ಹಬ್ಬ ಆಚರಿಸಿದರು.














