Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ವಲಸೆ ತಡೆಯುವದು ನಿಮ್ಮ ಜವಾಬ್ದಾರಿ : ಸಾವಂತ :

ವಲಸೆ ತಡೆಯುವದು ನಿಮ್ಮ ಜವಾಬ್ದಾರಿ : ಸಾವಂತ :



Author : Vinayak M Bhat

ವಿಬಿ-ಜಿ-ರಾಮ್-ಜಿ ಜುಲೈ 1ರಿಂದ  ದೇಶಾದ್ಯಂತ ಅನುಷ್ಠಾನ.

ಕಲಘಟಗಿ ತಾ. ಪಂ ನಲ್ಲಿ ಒಂದು ದಿನದ ತರಬೇತಿ.

ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ವಿಬಿ-ಜಿ-ರಾಮ್-ಜಿ ಯೋಜನೆ ಅನುಷ್ಠಾನ ಕುರಿತು ಒಂದು ದಿನದ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶದಂತೆ ಮಾಸ್ಟರ್ ಟ್ರೈನರ್ ಆಗಿ ತರಬೇತಿ ಪಡೆದ ಅಳ್ನಾವರ ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ ತುಕಾರಾಣಿ ಈ ಯೋಜನೆ ಕುರಿತು ತರಬೇತಿ ನೀಡಿದರು, ಗ್ರಾಮೀಣ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಿ  ನರೇಗಾದಲ್ಲಿ ಇದ್ದ ಕೂಲಿ ವಾರ್ಷಿಕ 100 ದಿನಗಳನ್ನ 125ದಿನಗಳಿಗೆ ಹೆಚ್ಚಿಸಲಾಗಿದೆ, ಆಯಾ ಭೌಗೋಲಿಕ ಹವಾಮಾನ ಅನುಸರಿಸಿ ಕೃಷಿಕರಿಗೆ ಕೂಲಿ ಆಳುಗಳಿಂದ ತೊಂದರೆ ಆಗಬಾರದು ಎನ್ನುವ ದೃಷ್ಟಿಕೋನದಿಂದ 60 ದಿನಗಳ ವಿರಾಮ ಇರುತ್ತದೆ. ಇ ಕೆ ವೈ ಸಿ ಕಡ್ಡಾಯಗೊಳಿಸಲಾಗಿದೆ,  ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬರಲಿವೆ, ನೀವೆಲ್ಲರೂ ಜನರ ಸಹಕಾರ ತೆಗೆದುಕೊಂಡು ಯೋಜನೆ ಯಶಸ್ವಿ ಗೊಳಿಸಿ ಎಂದರು. ಕಲಘಟಗಿ ತಾ. ಪಂ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ ಉದ್ಘಾಟನೆ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ತಮಗೆಲ್ಲರಿಗೂ ನರೇಗಾ ಯೋಜನೆಯಲ್ಲಿ ಸಾಕಷ್ಟು ಅನುಭವ ಇದೆ. ಇಲ್ಲಿ ಸ್ವಲ್ಪ ಬದಲಾವಣೆ ಆಗಿದೆ, ಗ್ರಾಮೀಣ ಕೂಲಿಕಾರರಿಗೆ ಮಾನವ ದಿನಗಳನ್ನು ಸೃಜನೆ ಮಾಡಿ ಕೆಲಸ ಒದಗಿಸಿ ವಲಸೆ ತಪ್ಪಿಸುವ ದೊಡ್ಡ ಜವಾಬ್ದಾರಿ ನಿಮ್ಮದು ಎಂದರು.

ಈ ಸಂಧರ್ಭದಲ್ಲಿಗ್ರಾ.ಉ.ಸಹಾಯಕ ನಿರ್ದೇಶಕ ಗಿರೀಶ ಕೋರಿ,ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಂತ್ರಿಕ  ಸಂಯೋಜಕ  ವರುಣ ಕುಲಕರ್ಣಿ, ಎಂ ಐ ಎಸ್  ಕೊಆರ್ಡಿನೆಟರ್ ನಾರಾಯಣ ಕಂಪ್ಲಿ, ಟಿ.ಸಿ. ಅಭಿಷೇಕ ಡೊಂಬರದ,ಎಲ್ಲ ತಾಂತ್ರಿಕ ಸಂಯೋಜಕರು ,ಐಇಸಿ ಸಂಯೋಜಕ ಎಸ್ ದಿವಾಕರ,ಎಲ್ಲ ಡಿ.ಇ.ಒ,ಬಿ ಎಫ್ ಟಿ, ಜಿಕೆಎಂ,ಟಿ.ಆರ್.ಎಂ ಗಳು ತರಬೇತಿ ಪಡೆದರು.