Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ಪೋಲ್‌ ವಾಲ್ಟ್‌ ಕ್ರೀಡೆಯಲ್ಲಿ ವಿದ್ಯಾರ್ಥಿನಿ ದಾಖಲೆ

ಪೋಲ್‌ ವಾಲ್ಟ್‌ ಕ್ರೀಡೆಯಲ್ಲಿ ವಿದ್ಯಾರ್ಥಿನಿ ದಾಖಲೆ



Author : Vinayak M Bhat

ಕಲಘಟಗಿಯ ಗುಡ್‌ ನ್ಯೂಸ್‌ ವೆಲ್ಫೇರ್‌ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ ಲಕ್ಷೀ ಕಮತಮನಿ ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್‌ ಕ್ರೀಡಾಕೂಟದ ಪೋಲ್‌ ವಾಲ್ಟ್‌ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಜೆ. ಎಸ್.‌ ಎಸ್‌ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ, ವಿದ್ಯಾಗಿರಿ ಧಾರವಾಡ ಅವರು ಧಾರವಾಡದ ಆರ್.‌ ಎನ್.‌ ಶೆಟ್ಟಿ ಕ್ರೀಡಾಂಗಣದಲ್ಲಿ ದಿನಾಂಕ 12 ರಿಂದ 14 ರ ವರೆಗೆ ಆಯೋಜಿಸಿದ 71 ನೇ ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್‌ ಕ್ರೀಡಾಕೂಟದ ಪೋಲ್‌ ವಾಲ್ಟ್‌ ಕ್ರೀಡೆಯಲ್ಲಿ ಈ ಹಿಂದೆ ಇದ್ದ 1.80 ಮೀಟರ್‌ ಎತ್ತರ ದಾಖಲೆ ಮುರಿದು 1.90 ಮೀಟರ್‌ ಎತ್ತರ ಜಿಗಿದು ಹೊಸ ದಾಖಲೆ ನಿರ್ಮಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಮಹಾವಿದ್ಯಾಲಯದ ಇನ್ನೊರ್ವ ವಿದ್ಯಾರ್ಥಿ ಕುಮಾರ ಸೂರಜ್‌ ಲಮಾಣಿ ಟ್ರಿಪಲ್‌ ಜಂಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾನೆ. ಇವರಿಗೆ ಗುಡ್‌ ನ್ಯೂಸ್‌ ಸಂಸ್ಥೆಯ ಕಾರ್ಯದರ್ಶಿಯಾದ ರೆ.ಬ್ರ. ವರ್ಗೀಸ್‌ ಕೆ. ಜೆ, ಪ್ರಾಚಾರ್ಯರಾದ ಡಾ. ಮಹೇಶ ಹೋರಕೆರಿ, ದೈಹಿಕ ಶಿಕ್ಷಕರಾದ ಶ್ರೀ ಅಲೇಕ್ಸ ಪ್ರಭು, ಉಪನ್ನಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.