ಜೀರ್ಣೋದ್ಧಾರಕ್ಕಾಗಿ ಕಾಯುತ್ತಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ
Author : Vinayak M Bhat
ಸರ್ಕಾರದ ಪ್ರತಿನಿಧಿಗಳ, ಪುರಾತತ್ವ ಇಲಾಖೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ?

ಸಾಮಾನ್ಯವಾಗಿ ಕಲೆಯ ತವರು ಕಲಘಟಗಿಯ ಅನೇಕ ಗ್ರಾಮಗಳಲ್ಲಿ ಜಕಣಾಚಾರಿ ನಿರ್ಮಿತ ಕಲ್ಮೇಶ್ವರ ದೇವಸ್ಥಾನಗಳನ್ನು ಕಾಣಬಹುದು. ಪ್ರಾಯಶಃ ಆ ಕಾಲದಲ್ಲಿ(ಹೊಯ್ಸಳರ) ನಾಗರಿಕರಿಗೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಅನ್ನಕ್ಕೆ ಕೊರತೆ ಇಲ್ಲವೇನೋ? ಅದಕ್ಕಾಗಿ “ಗಂಜೀ – ಗಟ್ಟಿ” ಎಂದು ಹೆಸರು ಬಂದಿರಬಹುದು. ಗತಕಾಲದಲ್ಲಿ ವೈಭವದಿಂದ ಇದ್ದ ಕಲಘಟಗಿ ತಾಲೂಕಿನ ಗಂಜೀಗಟ್ಟಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನವು ಇಂದು ಪಾಳು ಬಿದ್ದ ಸ್ಥಿತಿಯಲ್ಲಿ ಅವಸಾನದ ಅಂಚಿನಲ್ಲಿ ಇದೆ. ನಿಖರವಾಗಿ ಇಲ್ಲದಿದ್ದರೂ 5 ರಿಂದ 6 ನೇ ಶತಮಾನದಲ್ಲಿ

ನಿರ್ಮಾಣವಾಗಿರಬಹುದೆಂದು, ಇನ್ನೊಂದು ಮೂಲದ ಪ್ರಕಾರ ಕ್ರಿ.ಶ 12 ನೇ ಶತಮಾನ ಎಂದು ಹೇಳಲಾಗುತ್ತದೆ. ದೇವಸ್ಥಾನವು ಪೂರ್ವಾಭಿಮುಖವಾಗಿದ್ದು ಭೂಮಿಯ ಸಮತಟ್ಟಿನಿಂದ ಅಂದಾಜು 100 ಮೀಟರ್ ಎತ್ತರದಲ್ಲಿದೆ. ಗ್ರಾಮದ ರಿ.ಸ.ನಂ 451 ರ 2 ಎಕರೆ 4 ಗುಂಟೆ ವಿಸ್ತೀರ್ಣದಲ್ಲಿದೆ. ದೇವಸ್ಥಾನವು ಸಂಪೂರ್ಣ ಶಿಥಿಲ ಗೊಂಡಿದ್ದು ಗ್ರಾಮಸ್ಥರೇ ಅಲ್ಪ ಮಟ್ಟಿಗೆ ಸಂರಕ್ಷಣೆ ಮಾಡುತ್ತಲೇ ಇದ್ದಾರೆ. ಜನನಿಬಿಡ ಪ್ರದೇಶದಿಂದ ಹೊರಗಿದ್ದು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ.
ಈ ಕುರಿತು ದೇವಸ್ಥಾನ ಟ್ರಸ್ಟ ಸಮೀತಿ ಅಧ್ಯಕ್ಷರಾದ ಡಾ| ವೀರಣ್ಣ ಶೀಗೀಗಟ್ಟಿ ರವರು ಸುಮಾರು ವರ್ಷಗಳಿಂದ ಈ ಕುರಿತು ಸ್ವ ಆಸಕ್ತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಎಂ.ಎಲ್.ಸಿ ಪ್ರದೀಪ್ ಶೆಟ್ಟರ್, ಪುರಾತತ್ವ ಇಲಾಖೆಗೆ, ಎಚ್.ಡಿ.ಕುಮಾರಸ್ವಾಮಿ , ಹಾಲಿ ಸಂಸದ ಪ್ರಹ್ಲಾದ ಜೋಷಿ, ಮಾನ್ಯ ಸಚಿವ ಸಂತೋಷ ಲಾಡ್ ಅವರಿಗೆ, ಸ್ಥಳೀಯ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ. ಸಂಬಂಧಪಟ್ಟ ದಾಖಲೆಗಳನ್ನು ಕಾಯ್ದಿಟ್ಟಿದ್ದಾರೆ. ಈ ಕುರಿತು ಗ್ರಾಮದ ಬಸಪ್ಪ ಅಳ್ಳಿಗೇರಿ, ರಾಮನಗೌಡ ಪಾಟೀಲ್, ಶಂಕ್ರಪ್ಪ ಶಿಗಳ್ಳಿ, ರಾಜೇಸಾಬ ಕೊಪ್ಪದ, ಪರಪ್ಪ ಕೊಪ್ಪದ ಗಾಣೀಗೇರ, ನಿಂಗಪ್ಪ ಮುತ್ತಣ್ಣವರ, ಹಾಲಪ್ಪ ಕಂಪ್ಲಿಕೊಪ್ಪ, ಚನ್ನಬಸಪ್ಪ ನೇಕಾರ, ನಾಗಪ್ಪ ಹಡಪದ, ಬಸವರಾಜ ಹಳಕಟ್ಟಿ ಸೇರಿದಂತೆ ಎಲ್ಲರೂ ಪ್ರಯತ್ನ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡುವುದಾಗಿ ದೇವಸ್ಥಾನ ಜೀರ್ಣೋದ್ಧಾರವಾಗದಿದ್ದರೆ ಆಮರಣ ಉಪವಾಸ ಧರಣಿ ಮಾಡುತ್ತೇವೆ ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಸರ್ಕಾರವು ಇಂತಹ ಅಮೂಲ್ಯ ಪ್ರಾಚೀನ ಇತಿಹಾಸಗಳನ್ನು ಉಳಿಸಿ ಬೆಳೆಸಲಿ ಎಂದು ಪತ್ರಿಕೆಯು ಹಾರೈಸುತ್ತದೆ.
ವಿಶೇಷ ವರದಿ ಬಿ ನ್ಯೂಸ್ ಹಬ್
ವಿನಾಯಕ ಭಟ್ ಹುಲ್ಲಂಬಿ
7996095408














