Image
Breaking News
• ತೊಟ್ಟಿಲು ನಗರಿ ಕಲಘಟಗಿಗೆ ಹೊಸದಿಗಂತ ಪತ್ರಿಕೆ ವರದಿಗಾರ ಗಿರೀಶ್ ಮುಕ್ಕಲ್ಲ ಅವರಿಗೆ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ. • ಕಲಘಟಗಿ :ನೀವು ಆಶೀರ್ವದಿಸಿದ್ದರಿಂದ ಮೋದಿಜೀ ಸರಕಾರದಲ್ಲಿ ದೇಶ ಸೇವೆ ಮಾಡುತ್ತಿದ್ದೇನೆ. ಪ್ರಲ್ಹಾದ ಜೋಶಿ. • ಡಾ. ಎಸ್ ಜಾನಕಿ ಭೌತಿಕವಾಗಿ ಅಗಲಿದ್ದಾರೆ :ಮಲ್ಲಯ್ಯಸ್ವಾಮಿ.
28 Jul 2026 | 
ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು: ಅಣ್ಣಪ್ಪ ಓಲೇಕಾರ್

ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು: ಅಣ್ಣಪ್ಪ ಓಲೇಕಾರ್



Author : Vinayak M Bhat

ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಧಾರ ನ್ಯಾಯವಾದಗಳಲ್ಲಿ ಆತ್ಮ ಸ್ಥೈರ್ಯ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ, ಕೊಲೆ, ದೌರ್ಜನ್ಯಗಳು ಪದೇ ಪದೇ ನಡೆಯುತ್ತಿವೆ. ವಕೀಲರೂ ಸಹ ಸಮಾಜದ ಒಂದು ಅವಿಭಾಜ್ಯ ಅಂಗವಾಗಿರುತ್ತಾರೆ. ನಮ್ಮ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ವಕೀಲರಿದ್ದಾರೆ. ಇಲ್ಲಿಯವರೆಗೂ ಈ ಕುರಿತು ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಅನೇಕ ಬಾರಿ ಮನವಿ ನೀಡಿದರೂ ಹೋರಾಟಗಳನ್ನು ಮಾಡಿದರೂ ಯಾವ ಪ್ರಯೋಜನ ಆಗಿದ್ದಿಲ್ಲ. ಈ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಘನ ಸರ್ಕಾರವು ವಕೀಲರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಲ್ಲೆ ಮಾಡಿದವರಿಗೆ 3 ವರ್ಷ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ ವಿಧಿಸಲು ಈ ನಿಯಮ ಜಾರಿಗೆ ತಂದಿದ್ದಕ್ಕಾಗಿ ಕಲಘಟಗಿ ತಾಲೂಕಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಓಲೇಕಾರ್ ಧನ್ಯವಾದ ಅರ್ಪಿಸಿದ್ದಾರೆ.