ಅಂಗನವಾಡಿ ಕಾರ್ಯಕರ್ತೆಯರು ಪಡೆದ ತಾಯಂದಿರು ::ಎಂ. ಜಿ. ಭಟ್ಟ.
Author : Vinayak M Bhat
ಕುಮಟ ವರದಿ.
ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಕುಟುಂಬಕ್ಕೆ ಪಡೆದ ತಾಯಿ ಇದ್ದಂತೆ ಎಂದು ಜನಪರ ಹೋರಾಟ ವೇದಿಕೆಯ ಅಧ್ಯಕ್ಷ ಎಂ. ಜಿ. ಭಟ್ಟ. ಹೇಳಿದರು.
ತಾಲ್ಲೂಕಿನ ಜನಪರ ಹೋರಾಟ ಸಮೀತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಪೋಷಣ ಅಭಿಯಾನ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯಿಂದ ಹೊರಗೆ ಹೆಜ್ಜೆ ಇಡುವ ಮಕ್ಕಳಿಗೆ ನಿಜವಾದ ಪಡೆದ ತಾಯಂದಿರು, ಇಂತಹ ಸಾಮಾಜಿಕ ಕಾರ್ಯ ಮಾಡುವ ನಿಮಗೆ ಧನ್ಯವಾದಗಳು ಎಂದರು.ಜ. ಹೊ. ವೇ. ಜಿಲ್ಲಾ ಅಧ್ಯಕ್ಷ ಹೇಮಂತಕುಮಾರ ಮಾತನಾಡಿ ಪುಟ್ಟ ಮಕ್ಕಳ ಉತ್ತಮ ಆರೋಗ್ಯದ ಜೊತೆಗೆ ಲಾಲನೆ ಪಾಲನೆ ಮಾಡುವ ನಿಮಗೆ ಧನ್ಯವಾದಗಳು ಎಂದರು. ಸಿ ಡಿ ಪಿ ಒ ನಂದಕುಮಾರ್, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಘನ ಸರಕಾರಗಳು ಪೋಷಣೆ ಅಭಿಯಾನ ಕಾರ್ಯಕ್ರಮ ಜಾರಿಗೆ ತಂದಿದೆ, ಇದರ ಅನುಷ್ಠಾನ ಮತ್ತು ಯಶಸ್ವಿ ನಿಮಗೇ ಸಲ್ಲುತ್ತದೆ ಎಂದರು.ಸಂತೆಗುಳಿ ಗ್ರಾ. ಪಂ ಮಾಜಿ ಅಧ್ಯಕ್ಷ ವಿನಾಯಕ ಭಟ್ಟ, ಸಮಾಜದ ಇಂತಹ ಪವಿತ್ರ ಕಾರ್ಯ ಮಾಡುವವರನ್ನು ಗುರುತಿಸಿ ಗೌರವಿಸುವದು ನಮ್ಮೆಲ್ಲರ ಕರ್ತವ್ಯ ಎಂದರು. ಉಪಾಧ್ಯಕ್ಷ ಉದಯ ಭಟ್ಟ ಮಾತನಾಡಿ ನಿಮ್ಮ ಕಾರ್ಯ ಸಹನೆ ಹಾಗೂ ತಾಳ್ಮೆಯ ಸಂಕೇತ ಆಗಿದೆ ಎಂದರು. ಹಾಗೂ ಕಾರ್ಯಕರ್ತೆಯರಿಗೆ 18000ಗೌರವ ಧನಕ್ಕೆ ಆಗ್ರಹಿಸಿದರು.ಮೇಲ್ವಿಚಾರಕಿ ಇಂದಿರಾ ಹರಿಕಾಂತ ಮಾತನಾಡಿದರು.
ಪ್ರಮುಖರಾದ ಈಶ್ವರ ಮರಾಠಿ, ಗಣೇಶ ನಾಯಕ ಸೇರಿದಂತೆ ರತ್ನ ಹಾಗ ಹನಮಂತ ನಾಯಕ್, ಶಾಂತಿಗೌಡ, ಕುಸುಮ ನಾಯ್ಕ್, ಪದ್ಮವತಿ ನಾಯ್ಕ್, ಮಾದೇವಿ ಗೌಡ, ಕಲಾವತಿ ಮರಾ ಠಿ , ಸುಮನ ಭಂಡಾರಿ, ಲಲಿತಾ ಗೌಡ, ಅನಸೂಯ ನಾಯ್ಕ್, ಲೀಲಾವತಿ ನಾಯ್ಕ್, ರೇವತಿ ನಾಯ್ಕ್, ಸೀಮಾ ಭಟ್ಟ, ಸುಧಾ ಹೆಗಡೆ, ವಿಮಲಾ ನಾಯ್ಕ್, ಗುಲಾಬಿ ಎಂ ಬಗ್ಗೊಣ, ಶೈಲಾ ಶೆಟ್ಟಿ, ಕಲ್ಪನಾ ಶೆಟ್ಟಿ, ಸರೋಜ ನಾಯ್ಕ್,ಪ್ರತೀಕಾ ಭಂಡಾರಿ, ವಿಜಯ ನಾಯ್ಕ್, ದೇವು ಮರಾಠಿ, ಗಣಪತಿ ಮರಾಠಿ, ಭವ್ಯ ಮರಾಠಿ, ಉದಯ ಮರಾಠಿ, ಜಯಂತ ಮರಾಠಿ, ಮುಖ್ಯ ಶಿಕ್ಷಕ ಮಂಜುನಾಥ ಆಡಗುಂದಿ, ಸಹ ಶಿಕ್ಷಕ ಗಣೇಶ ನಾಯ್ಕ, ನಯನಾ ನಾಯ್ಕ, ಅನುಷಾ ಆಚಾರಿ ಸೇರಿದಂತೆ 30 ಅಂಗನವಾಡಿ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.ಮತ್ತು ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು.

150 ಕ್ಕೂ ಹೆಚ್ಚು ಗ್ರಾಮಸ್ಥರು ಉಪಸ್ಥಿತರಿದ್ದರು. ಯಮುನ ಭಟ್ಟ ಸ್ವಾಗತಿಸಿ ವಂದಿಸಿದರು.














