ಶ್ರೀ ಸಾಂಬಾಸೇವಾ ಸಮೀತಿಯಿಂದ ವಿಶ್ವ ಪರಿಸರ ದಿನಾಚರಣೆ
Author : Vinayak M Bhat
ಮೂಲತೋ ಬ್ರಹ್ಮ ರೂಪಾಯ :ಚಿದಂಬರ ಜೋಶಿ.
ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣುರೂಪೇಣ ಅಗ್ರತಃ ಶಿವರೂಪಾಯಃ.
ವೃಕ್ಷ ರಾಜಯತೇ ನಮ್ಹ.
ಪ್ರಕೃತಿಯಲ್ಲಿ ಸೃಷ್ಟಿ ಲಯದ ಸಮತೋಲನ ಕ್ಕಾಗಿ ಬ್ರಹ್ಮ,ವಿಷ್ಣು,ಮಹೇಶ್ವರ ಇರುವಂತೆ ವೃಕ್ಷಗಳಲ್ಲಿಯೂ ಈ ಮೂರೂ ದೇವತೆಗಳು ನೆಲೆಸಿದ್ದಾರೆ ಎಂದು ಶ್ರೀ ಸಾಂಬ ಸೇವಾ ಸಮೀತಿ ಅಧ್ಯಕ್ಷ ಚಿದಂಬರ ಜೋಶಿ ಹೇಳಿದರು.
ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾತನಾಡಿದರು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪಟ್ಟಣದಲ್ಲಿ ಅತೀ ಶೀಘ್ರದಲ್ಲಿ ನಕ್ಷತ್ರವನ ನಿರ್ಮಾಣವಾಗಲಿ ಎಂದರು. ದೇವಸ್ಥಾನದ ನಿರ್ಮಾತೃಗಳಾದ ಲಕ್ಶ್ಮೀಬಾಯಿಮಂಜುನಾಥ ಕಡ್ಲಾಸ್ಕರ ಸಸಿ ನೆಡುವ ಮೂ ಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಶಾರದಾ ಭಜನಾ ಮಂಡಳಿಯ ಸರ್ವ ಸದಸ್ಯರು, ವೀಣಾ ಶೇವಡೆ, ಅರುಂಧತಿ ಕುಲಕರ್ಣಿ, ಅಪರ್ಣಾ ಶೇವಡೆ, ದೀಪಾ ಪಂಡಿತ, ಚಿಂತಿತಾ ಜೋಶಿ ಶ್ರೀಲಕ್ಷ್ಮಿ ಜೋಷಿ,ಸುರೇಖಾ ದೈವಜ್ಞ, ಪದ್ಮವತಿ ರೇವಣಕರ, ಪಾರ್ಥ್ ಜೋಶಿ, ಅರುಂಧತಿ ಜೋಶಿ, ಕಲ್ಪನಾ ಸುಧಾ ಶೆಟ್ಟಿ, ಕುಮಾರಿ ಮಾತೃಕಾ, ತ್ರಿವರ್ಣ ಪಾಲ್ಗೊಂಡಿದ್ದರು.














