ಪರಿಸರ ಸಂರಕ್ಷಣೆ ನಿರಂತರ ಕ್ರೀಯೆ :ವಿನಾಯಕ ಭಟ್ಟ.
Author : Vinayak M Bhat
ಪರಿಸರ ಸಂರಕ್ಷಣೆ ಕೇವಲ ರಕ್ಷಣೆ ಅಲ್ಲ ಇದು ಪ್ರತಿದಿನದ ನಿರಂತರ ಕ್ರೀಯೆ ಎಂದು ಪರಿಸರ ಪ್ರೇಮಿ ವಿನಾಯಕ ಭಟ್ಟ ಹುಲ್ಲಂಬಿ ಹೇಳಿದರು.

ಪಟ್ಟಣದ ಇಂಗ್ಲಿಷ್ ಗರ್ಲ್ಸ್ ಹೈಸ್ಕೂಲನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉದ್ಘಾಟಕರಾಗಿ ಮಾತನಾಡಿದರು. ನನ್ನ ತಂದೆಯ ಪ್ರೇರಣೆಯಿಂದ 30 ವರ್ಷಗಳ ಹಿಂದೆ ಹಚ್ಚಿದ ಸಾಗುವಾನೆ ಸಸಿಗಳು ಇದು ಬೆಳೆದು ಲಕ್ಷಾಂತರ ಬೆಲೆ ಬಾಳುವ ಮರಗಳಾಗಿ ಬೆಳೆದು ನಿಂತಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತಮ್ಮ ಹೊಲದಲ್ಲಾಗಲಿ ಮನೆಯ ಹಿತ್ತಲದಾಗಲಿ ಕನಿಷ್ಠ ಒಂದು ಸಸಿ ಹಚ್ಚಿ ಬೆಳೆಸಿರಿ,ತಾವೆಲ್ಲರೂ ಈ ಕುರಿತು ಛಾಯಾಚಿತ್ರ ತೆಗೆದು ನಿಮ್ಮ ಶಿಕ್ಷಕರಲ್ಲಿ ಕಡ್ಡಾಯವಾಗಿ ಹಂಚಿಕೊಳ್ಳಿ, ತಾವು ಮುಂದಿನ ಜೀವನದಲ್ಲಿ ಪರಿಸರ ರಕ್ಷಣೆಯನ್ನು ನಿರಂತರವಾಗಿ ಮಾಡಿರಿ ಎಂದರು. ಸಾಹಿತಿ ಹಾಗೂ ವರದಿಗಾರ ಗಿರೀಶ ಮುಕ್ಕಲ್ಲ ಮಾತನಾಡಿ ಮಕ್ಕಳಿಲ್ಲದ ತಿಮ್ಮಕ್ಕ ತನ್ನ ಹುಚ್ಚು ಹವ್ಯಾಸದಿಂದ ಗಿಡಗಳನ್ನು ಹಚ್ಚಿ ಬೆಳಸಿ ಸರಕಾರದಿಂದಪದ್ಮಶ್ರೀ ಪ್ರಶಸ್ತಿ ಪಡೆದು ಸಾಲುಮರದ ತಿಮ್ಮಕ್ಕ ಎಂದು ಶಾಶ್ವತವಾಗಿ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾಳೆ ಎಂದರು. ಪ್ರಾಸ್ತಾವಿಕವಾಗಿ ಶಿಕ್ಷಕ ವಿನಾಯಕ ಶೇಟ್ ಮಾತನಾಡಿ ದೇಶ ವಿದೇಶ ಸುತ್ತಾಡಿದ ಭಟ್ಟ ಅವರು ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ, ಉತ್ತಮ ಅರೋಗ್ಯಕ್ಕೆ ಉತ್ತಮ ಆಹಾರ ಪರಿಸರ ಕಾರಣ, ಸಾಹಿತಿ ಹಾಗೂ ವರದಿಗಾರರಾದ ಗಿರೀಶ ಮುಕ್ಕಲ್ಲ ಅವರು ಸಾಹಿತ್ಯ ಕೃಷಿಯ ಮೂಲಕ ಪರಿಸರ ಜಾಗ್ರತಿ ಬೆಳೆಸುತ್ತಿದ್ದಾರೆ ಎಂದರು.ಮುಖ್ಯ ಅಧ್ಯಾಪಕ ಸಂತೋಷ ಎಸ್ ಬಿಜಾಪುರಮಾತನಾಡಿ ಪ್ರತಿಯೊಬ್ಬರೂ ಗಿಡ ಹಚ್ಚಿ, ರಕ್ಷಣೆ ಮಾಡಿರಿ, ತಾವು ಹಚ್ಚಿದ ಗಿಡಗಳ ಫೋಟೋಗಳನ್ನು ಜಿ ಪಿ ಎಸ್ ಮುಖಾಂತರ ನಮಗೆ ತಲುಪಿಸಿ ಎಂದರು. ಮಕ್ಕಳಿಗೆ ರಸ ಪ್ರಶ್ನೆ ಹಮ್ಮಿಕೊಳ್ಳಲಾಗಿತ್ತು.
ಸಿಬ್ಬಂದಿಗಳಾದ ಆರ್ ಡಿ ನೀಲಣ್ಣವರ, ಚೇತನಾ ಕೆ ಚೆನ್ನಗೌಡರ, ಜೆ ಎಫ್ ಉಣಕಲ್ಲ, ಕು. ಐಶ್ವರ್ಯಲಕ್ಷ್ಮಿ, ಮೇಘಾ ಹುದ್ದಾರ, ಶಾಲೆಯ ಎಲ್ಲ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಪ್ರಾರ್ಥನೆ ಕು. ಪೂರ್ಣಿಮಾ ಪಾಟೀಲ,ನಿರೂಪಣೆ ಸಂತೋಷ ಇಟಗಿ, ಸಿ ಎನ್ ಹಂಚಿನಮನಿ ವಂದನಾರ್ಪಣೆ ಮಾಡಿದರು.















