Image
Breaking News
•        ಸಂಪಾದಕೀಯ   ಸಾಧನೆಯ ಶಿಖರ :ಡಿ. ಕೆ.    ಶಿವಕುಮಾರ್  • ಸಂತೋಷ ಲಾಡ್ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಒತ್ತಾಯ :ಮುರಳ್ಳಿ  • 28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ
06 Jun 2026 | 
ಸಂತೋಷ ಲಾಡ್ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಒತ್ತಾಯ :ಮುರಳ್ಳಿ 

ಸಂತೋಷ ಲಾಡ್ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಒತ್ತಾಯ :ಮುರಳ್ಳಿ 



Author : Vinayak M Bhat

ಮಾನ್ಯ ಸಂತೋಷ ಲಾಡ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಪಕ್ಷದ ಮುಖಂಡರು,ಸದಸ್ಯರು ಹಾಗೂ ಕಲಘಟಗಿ ಮತ ಕ್ಷೇತ್ರದ ಅಭಿಮಾನಿ ಬಳಗದೊಂದಿಗೆ ಒತ್ತಾಯಿಸಿದ್ದಾರೆ. ಕಲಘಟಗಿ ಬ್ಲಾಕ್ ಕಾಂಗ್ರೆಸ್ ಸಮೀತಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ಸನ್ಮಾನ್ಯ ಲಾಡ್ ಅವರು ಆಡಳಿತದಲ್ಲಿ  ಹಾಗೂ ಕ್ಷೇತ್ರದ ಅಭಿವೃದ್ಧಿ,ಅರೋಗ್ಯ ಸೇವೆ, ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಧನಸಹಾಯ, ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರ ವಾಗಿ ನಡೆಸುತ್ತಲೆ ಇದ್ದಾರೆ.

ನುಡಿದಂತೆ ನಡೆದ ಮಾನ್ಯ ಸಿದ್ದರಾಮಯ್ಯನವರು  ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಉತ್ತಮ ಯೋಜನೆ, ಆಡಳಿತ ನೀಡಿದ್ದಾರೆ.ಬಡವರ್ಗದವರ ಏಳಿಗೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದಾರೆ. ಇಂತಹ ಸಂಧರ್ಭದಲ್ಲಿ ನಮ್ಮ ಮೆಚ್ಚಿನ ಸಂತೋಷ ಲಾಡ್ ಅವರಿಗೆ ಡಿ ಸಿ ಎಂ ಹುದ್ದೆ ನೀಡಲು ಒತ್ತಾಯಿಸುತ್ತಿದ್ದೇವೆ. 

ಈ ಸಂಧರ್ಭದಲ್ಲಿ ಸೋಮಶೇಖರ ಬೆನ್ನೂರು, ಶಿವಪೂಜಿ ತಡಸಮಠ,ಬಾಬಣ್ಣ ಅಂಚಟಗೇರಿ,ಕುಮಾರ ಖಂಡೇಕರ, ಶಾಂತಲಿಂಗ ಬೇರುಡಗಿ, ಮಹೇಶ ಅಲಗೂರ,ರಫೀಕ್ ಸುಂಕದ, ಶಕುಂತಲಾ ಬೋಳಾರ,ಮಾಲಾ ತುರಿಹಾಳ, ವೃಷಭೇಂದ್ರ ಪಟ್ಟಣಶೆಟ್ಟಿ ಹನುಮಂತಪ್ಪ ಹರಿಜನ ಬಾಳು ಖಾನಾಪುರ ಕುಮಾರ ಖಂಡೇಕರ,  ಮಂಜುನಾಥ ಧನಿಗೊಂಡ, ಗುರು ಕಂಪ್ಲಿ, ಸಿದ್ದಣ್ಣ ತಲಬಾಗಿಲು,ಹಾಗೂ  ಅಭಿಮಾನಿಗಳು ಒತ್ತಾಸಿದ್ದಾರೆ.