ಹಟಕಿನಾಳ ಗ್ರಾಮದಲ್ಲಿ ಹಟ್ಟಿಗೆ ನುಗ್ಗಿದ ಚಿರತೆ :ಎರಡು ಕರುಗಳ ರಕ್ತ ಹೀರಿದ ಚಿರತೆ.
Author : Vinayak M Bhat
ಮನೆಯಿಂದ ಹೊರಗೆ ಹೋಗಲು ಭಯಪಡುತ್ತಿರುವ ಗ್ರಾಮಸ್ಥರು.

ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದ ರೈತ ಶಂಕರ ಮಹಾದೇವಪ್ಪ ಅಮಗಾವ್ಕರ ಅವರ ಹಟ್ಟಿಗೆ ರಾತ್ರಿ ವೇಳೆಯಲ್ಲಿ ನುಗ್ಗಿ ಎರಡು ಕರುಗಳನ್ನು ಕೊಂದಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿ ಅರುಣಕುಮಾರ ಅಷ್ಟಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಘಟನೆಯ ವಿವರ ಪಡೆದು ಹಾನಿಗೊಳಗಾದ ರೈತನಿಗೆ ಪರಿಹಾರ ಕೊಡಿಸುವದಾಗಿ ಭರವಸೆ ನೀಡಿದ್ದಾರೆ.
ಆದಷ್ಟು ತೀವ್ರವಾಗಿ ಚಿರತೆ ಸೆರೆ ಹಿಡಿದು ಪ್ರಾಣ ರಕ್ಷಣೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ
ವರದಿ :ಬಿ. ನ್ಯೂಸ್. ಹಬ್. ವಿನಾಯಕ ಭಟ್ಟ. ಹುಲ್ಲಂಬಿ












