Image
Breaking News
• ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ. • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
11 Sep 2026 | 
ಶಿಕ್ಷಣವೇ ಶಕ್ತಿ, ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ

ಶಿಕ್ಷಣವೇ ಶಕ್ತಿ, ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ



Author : Vinayak M Bhat

ಬೇಟಿ ಬಚಾವ್, ಬೇಟಿ ಪಡಾವ್
ಯಾವುದೇ ಸರ್ಕಾರವಿರಲಿ ರಾಜ್ಯವೇ ಆಗಲಿ ಕೇಂದ್ರವೇ ಆಗಲಿ ಶಿಕ್ಷಣಕ್ಕೆ ಹಾಗೂ ಶಿಕ್ಷಣದ ಮೂಲ ಸೌಲಭ್ಯಗಳಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತದೆ. ಅದರಲ್ಲೂ ಭಾರತ ದೇಶದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಮಹತ್ವ ಕೊಟ್ಟಿದೆ. ಅದೃಷ್ಟವೋ, ದುರಾದೃಷ್ಟವೋ ತಾಲೂಕಿನ ಪಟ್ಟಣದ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಯ ಕಥಟಯೂ ಹೌದು, ವ್ಯಥೆಯೂ ಹೌದು. ಮಕ್ಕಳ ಸಂಸ್ಕಾರಗಳು, ಸಂಸ್ಕøತಿಗಳು ಪ್ರಾರಂಭವಾಗುವುದು ಈ ಶಾಲೆಗಳಿಂದಲೇ. ಅದರಲ್ಲೂ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲು ಅನೇಕ ವ್ಯವಸ್ಥೆಗಳು ಇವೆ.
   ಹೆಸರಿಗೆ ಮಾದರಿ ಎನಿಸಿಕೊಂಡಿರುವ ಈ ಶಾಲೆಯಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ತಮ್ಮ ಭವಿಷ್ಯ ನಿರ್ಮಿಸಲು ಶಾಲೆಗೆ ಬರುತ್ತಾರೆ. ಆದರೆ 3 ಶೌಚಾಲಯಗಳಿದ್ದರೂ ಒಂದೂ ಬಳಕೆಯಲಿಲ್ಲ. ಕಂಪ್ಯೂಟರ್ ಕೊಠಡಿಯು ಧೂಳು ತುಂಬಿದೆ. ಕಲಘಟಗಿ ಪಟ್ಟಣಕ್ಕೆ ಸಮೀಪದ ಬೆಣಚಿ ಕೆರೆಯಿಂದ ನೀರು ಪೂರೈಕೆ ಆಗುತ್ತಿದೆ ಆದರೂ ಈ ಶಾಲೆಗೆ ನೀರಿನ ವ್ಯವಸ್ಥೆ ಇಲ್ಲ. ಅಸ್ಥವ್ಯಸ್ಥವಾಗಿ ಬಿದ್ದಿರುವ ಕ್ರೀಡಾ ಸಾಮಗಿಗಳು. ತಾವೇ ಕಸ ಗುಡಿಸಿಕೊಂಡು ನೆಲದ ಮೇಲೆ ಕೂರುವ ಮುದ್ದು ಮಕ್ಕಳು. ಈ ಕುರಿತು ಎಸ್.ಡಿ.ಎಂ.ಸಿ ಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಸಮಧಾನ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕಿಯಾದ ಆರ್.ಕೆ.ಕಾಂಬಳೆ ಆಗಾಗ ಶೌಚಗೃಹಗಳನ್ನು ಸ್ವಚ್ಛ ಮಾಡಿಸುತ್ತೇವೆ. ಎಸ್.ಡಿ.ಎಂ.ಸಿ ಕಮೀಟಿಯ ಗಮನಕ್ಕೆ ತಂದಿದ್ದೇವೆ. ನೀರಿನ ಸಮಸ್ಯೆ ಇರುವುದು ನಿಜ. ಸಧ್ಯದಲ್ಲೇ ಸರಿಪಡಿಸುತ್ತೇವೆ ಎಂದರು. 
ಅನೇಕ ಸಂದರ್ಭಗಳಲ್ಲಿ ಡಾ|ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‍ರಾಮ ಅಂತಹ ಪುಣ್ಯ ಪುರುಷರ ಜಯಂತಿಗಳನ್ನು ಇದೇ ಶಾಲೆಯ ಆವರಣದಲ್ಲಿ ಆಚರಿಸುತ್ತೇವೆ. ಮಾನ್ಯ ಸಚಿವರೇ ಇತ್ತ ತಿರುಗಿ ನೋಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿರಿ ಎಂದು ಹಾರೈಸುತ್ತೇವೆ.