Image
Breaking News
• ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ. • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
11 Sep 2026 | 
ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ.

ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.

ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ.



Author : Vinayak M Bhat

ಕಾನೂನು ಉಲ್ಲಂಘನೆ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವದಾಗಿ ಕಲಘಟಗಿ ಆರಕ್ಷಕ ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿ ಹೇಳಿದರು.
ಠಾಣೆಯ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ವಿವಿಧ ಹಳ್ಳಿಗಳಿಂದ ಆಗಮಿಸಿದ ಪ್ರಮುಖರು ಹಾಗೂ ಉತ್ಸವ ಸಮೀತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಸುಪ್ರೀಂ ಕೋರ್ಟ್ ನಆದೇಶದಂತೆ ಈ ವರ್ಷ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿ ಸಿ ಕ್ಯಾಮರಾ ಕಡ್ಡಾಯ, ಪಿ ಓ ಪಿ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧ,ಆಯಾ ಸಮೀತಿಯಸದಸ್ಯರು ಹೆಸರುಗಳು ಇರುವ ಟೀ ಶರ್ಟ್ ಗಳನ್ನು ಕಡ್ಡಾಯವಾಗಿ  ಧರಿಸಬೇಕು, ಜೂಜು ನಿಷೇಧ, ನೀಡಿದ ಅವಧಿಯ ದಿನವೇ ವಿಸರ್ಜನೆ, ನೀಡಿದ ಗಡುವಿನ ಸಮಯದ ಒಳಗೆ ವಿಸರ್ಜನೆ,ನಿರಂತರ ಸ್ವಯಂ ಸೇವಕರ ನಿಯೋಜನೆ,ಇತ್ಯಾದಿ ಕಾನೂನುಗಳನ್ನು ವಿವರಿಸಿದರು, ಡಿ ಜೆ ಸಂಸ್ಕೃತಿ ಒಳ್ಳೆಯದಲ್ಲ, ಇದರಿಂದ ಎಷ್ಟು ಸಾವು ನೋವು ಸಂಭಾವಿಸಿವೆ? ಎಷ್ಟು ಮನಸ್ತಾಪ, ದ್ವೇಷ ಹುಟ್ಟುತ್ತವೆ?ತಮಗೆಲ್ಲರಿಗೂ ಗೊತ್ತಿರುವ ವಿಷಯ,ಇದರ ಬದಲು ನಮ್ಮ ಭಾರತೀಯ ಸಂಸ್ಕೃತಿಯ ವಾದ್ಯ ಮೇಳಗಳನ್ನು ಅಳವಡಿಸಿಕೊಳ್ಳಿ ಇದರಿಂದ ನಮ್ಮಪುರಾತನ ವೈಭವ ಮರುಕಳಿಸುತ್ತವೆ, ತಮ್ಮ ಸಹಕಾರ ಮುಖ್ಯ, ನಾವು ಇರುವದು ನಿಮ್ಮ ಸೇವೆಗಾಗಿ ವಿನ್ಹ ಶಿಕ್ಷೆ ಕೊಡಲು ಅಲ್ಲಾ, ಉಲ್ಲಂಘಸಿದಾಗ ಅನಿವಾರ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ತಹಸೀಲ್ದಾರ್ ಬಸವರಾಜ ಹೊಂಕಣದವರ ಮಾತನಾಡಿ,ನಮ್ಮ ತಾಲೂಕು ಶಾಂತಿಯತವಾಗಿ ಈ ಹಬ್ಬವನ್ನು ಆಚರಿಸಿ ಉತ್ತಮ ತಾಲ್ಲೂಕು ಎಂದು ಗೌರವ ತರುವುದು ತಮ್ಮ ಕೈಯ್ಯಲ್ಲಿದೆ ಗೌರಿ ಗಣೇಶ ಎಲ್ಲರಿಗೂ ಸುಖ ಸಂತೋಷ ನೀಡಲಿ ಎಂದರು. ವೃಷಭೇಂದ್ರ ಪಟ್ಟಣಶೆಟ್ಟಿ,ಶೇಕಪ್ಪ ದೊಡಗೌಡ್ರು,ರುದ್ರಯ್ಯ ಚಿಕ್ಕಮಠ,
ಮಂಗಲಪ್ಪ ಲಮಾಣಿ ಶಾಂತಿಯುತ ಹಬ್ಬ ಆಚರಣೆಗೆ ವಿನಂತಿಸಿಕೊಂಡರು.
ಈ ಸಂಧರ್ಭದಲ್ಲಿ  ಪಿಎಸ್ಐ ಸಿ. ಏನ್.ಕರವೀರಪ್ಪನವರ ಪಪಂ ಆರೋಗ್ಯ ನೀರಿಕ್ಷಕಿ ಪ್ರಿಯಾಂಕಾ,ಶಿವಲಿಂಗ ಮೂ ಗಣ್ಣವರ ಲೋಕೇಶ್ ಬೆಂಡಿಕಾಯಿ ಮತ್ತು ಎಲ್ಲ ಸಿಬ್ಬಂದಿ ವರ್ಗ, ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.