ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
Author : Vinayak M Bhat
ಕಲಘಟಗಿ : ಬಸವಣ್ಣನವರು ಜಗತ್ತಿನ ವಿಸ್ಮಯ, ಬಸವಣ್ಣನ ಹಾಗೂ ಶರಣರ ವಚನತತ್ವಗಳು ಪ್ರಪಂಚದ ವಿವಿಧ ದಾರ್ಶನಿಕರ ವಿಚಾರಗಳಿಗೆ ಕಡಿಮೆ ಏನಿಲ್ಲ 12 ಶತಮಾನದಲ್ಲಿಯೇ ವಿಚಾರ ಕ್ರಾಂತಿ ಮಾಡಿದ ಬಸವಣ್ಣ ಸಮಾನತೆ ಸಾರಿದ್ದರು, ಶರಣರ ಮಾರ್ಗದಲ್ಲಿ ನಡೆಯಿರಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಅಧಿಕಾರಿ ಡಾ ಸಿ. ಸೋಮಶೇಖರ ನುಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಚನ್ನಬಸವ ದಾಸೋಹ ಮಂಟಪದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿ ಕಲಘಟಗಿ ತಾಲೂಕು ಶರಣರು ನಡೆದ ನಾಡು ಇಂತಹ ಸ್ಥಳದಲ್ಲಿ ಬಂದು ಮಾತನಾಡುವುದು ಸಂತಸ ತಂದಿದೆ ಎಂದರು.
ಜನಪದ ತಜ್ಞ ಡಾ ರಾಮು ಮೂಲಗಿ ಮಾತನಾಡಿ, ಡಾ ಸಿ. ಸೋಮಶೇಖರ ಅವರು ಧಾರವಾದಲ್ಲಿದ್ದಾಗ ಜನಾನುರಾಗಿ ಅಧಿಕಾರಿ ಎಂದು ಹೆಸರು ಪಡೆದಿದ್ದರು ಅವರು ಜಿಲ್ಲೆಗೆ ಸಲ್ಲಿಸಿದ ಸೇವೆ ಚಿರಕಾಲ ನೆನಪಿನಲ್ಲಿರುತ್ತದೆ ಎಂದರು.
ಜಿಲ್ಲಾಧ್ಯಕ್ಷ ಪ್ರೊ ಸಂಗಮನಾಥ ಲೋಕಾಪುರ ಮಾತನಾಡಿ ಶರಣ ಸಾಹಿತ್ಯ ಪರಿಷತ್ತು ಈ ಅವಧಿಯಲ್ಲಿ ರಾಜ್ಯ ಸಮ್ಮೇಳನಗಳನ್ನು ಮಾಡಿ ತಮ್ಮ ಕಾರ್ಯತತ್ಪರತೆ ತೋರಿದ್ದಾರೆ ಯಾವುದೇ ಜವಾಬ್ದಾರಿ ವಹಿಸಿದರೂ ಕೂಡ ದಣಿವರಿದಂತೆ ಶರಣ ಸಾಹಿತ್ಯ ಬಗೆಗಿನ ಕಾರ್ಯ ಮಾಡುತ್ತಾ ಬಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆಯಾಗಿ ಶರಣೆ ಪ್ರತಿಭಾ ರಾ. ಶೀಲವಂತರ ಅವರನ್ನು ನೇಮಕ ಮಾಡಿ ಆದೇಶವನ್ನು ಅನುಮೋದಿಸಲಾಯಿತು. ಶಾಂತಾದೇವಿ ಮಾತಾಜಿ ದಿವ್ಯ ಸಾನಿಧ್ಯ ವಹಿಸಿದ್ದರು. ನೂತನವಾಗಿ ದತ್ತಿ ನೀಡಿದ ಬಸವರಾಜ ದೊಡ್ಡಮನಿ ಅವರಿಗೆ ಗೌರವಿಸಲಾಯಿತು.
ಸಭೆಯಲ್ಲಿ ಜನಪದ ವಿದ್ವಾಂಸ ಎಂ ಆರ್ ತೋಟಗಂಟಿ, ಪ್ರೊ. ಸುರೇಶ ಮರಿಲಿಂಗಣ್ಣನವರ, ಹಿರಿಯ ಪತ್ರಕರ್ತ ಪ್ರಭಾಕರ ನಾಯಕ, ಕೆ ಸಿ ಮಲ್ಲಿಗವಾಡ, ಡಾ ಹೆಚ್ ಹೆಚ್ ನದಾಫ, ಶ್ರೀನಿವಾಸ ಮೂರ್ತಿ, ಶಂಕರ ದಾಸನಕೊಪ್ಪ, ಶಿವರುದ್ರಪ್ಪ ದನಿಗೊಂಡ, ಸಹದೇವ ಉಳ್ಳಾಗಡ್ಡಿ, ಅನುಸೂಯ ಶೀಲವಂತರ, ಕಸ್ತೂರಿ ಉಣಕಲ್, ಅಶೋಕ ಶೀಲವಂತರ, ತಿಪ್ಪಣ್ಣ ಕುರಗುಂದ, ಶಿವದೇವ ದೇಸಾಯಿ, ಮೂಗಪ್ಪ ತಡಸ, ರಾಜು ಶೀಲವಂತರ, ಬಸವರಾಜ ಉಳ್ಳಾಗಡ್ಡಿ, ಮಂಜುಳಾ ಕುರುಗುಂದ, ಲಕ್ಷ್ಮೀ ಕೋಟಗುಣಸಿ, ಶಂಕರ ರೆಡ್ಡಿ, ವಿನಾಯಕ ಭಟ್, ಸೇರಿದಂತೆ ಹಿರೆಹೊನ್ನಳ್ಳಿ ಅನುಭವ ಮಂಟಪದ ಶರಣರು ಇದ್ದರು. ತಾಲೂಕಾಧ್ಯಕ್ಷ ಗುರುಲಿಂಗ ಉಣಕಲ್ ಪ್ರಾಸ್ತಾವಿಕ ನುಡಿದರು. ಕಾರ್ಯದರ್ಶಿ ಗಿರೀಶ ಮುಕ್ಕಲ್ಲ ಸ್ವಾಗತಿಸಿದರು.













