ಕಾಮಗಾರಿ ಸದುಪಯೋಗ ಪಡಿಸಿಕೊಳ್ಳಿ :ಭುವನೇಶ್ ಪಾಟೀಲ.
Author : Vinayak M Bhat
ವಿ ಬಿ ಜಿ ರಾಮ್ ಜಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ ಹೇಳಿದರು.
ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಕನ್ನೆ ನಾಯಕನ ಕೆರೆ ಪುನಶ್ಚೇತನ ಹೂಳು ಎತ್ತುವ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ, ಆದರೆ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಇಲ್ಲಾ, ಮೊದಲು ಇದ್ದ 100ದಿನಗಳ ಬದಲು 125 ದಿನಕ್ಕೆ ಹೆಚ್ಚಿಸಲಾಗಿದೆ,ಈ ಸಾಲಿಗೆ ಕೂಲಿಯನ್ನು 382ರೂ ಗೆ ಹೆಚ್ಚಿಸಲಾಗಿದೆ,ವೈಯುಕ್ತಿಕ ಕಾಮಗಾರಿಗಳಿವೆ, ಸದಾ ತಾವೆಲ್ಲರೂ ಗ್ರಾಮ ಪಂಚಾಯತ ಸಂಪರ್ಕದಲ್ಲಿರಿ ಎಂದರು.ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಈ ಸಂಧರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ್ ಸಾವಂತ, ಸಹಾಯಕ ನಿರ್ದೇಶಕ ಗಿರೀಶ ಕೋರಿ, ತಾಂತ್ರಿಕ ಸಂಯೋಜಕ ವರುಣ ಕುಲಕರ್ಣಿ,ಐ ಇ ಸಿ ಸಂಯೋಜಕ ಎಸ್ ದಿವಾಕರ, ಗ್ರಾ. ಪಂ ಅಧಿಕಾರಿ ವಿಜಯಲಕ್ಷ್ಮಿ ಬರದೂರ,ತಾಂತ್ರಿಕ ಸಹಾಯಕ,ಸಿದ್ದಲಿಂಗ ರೆಡ್ಡಿ,ಗಣಕ ಯಂತ್ರ ಮಂಜುನಾಥ ತಾವರಗೇರಿ, ಬಸವರಾಜ ಓಲೇಕಾರ,40ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಸ್ಥಳದಲ್ಲಿದ್ದರು.













