Image
Breaking News
• ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ. • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
11 Sep 2026 | 
ನಾಳೆ ಮಾನ್ಯ ಸಚಿವ ಸಂತೋಷ ಲಾಡ್ ಅವರಿಂದ ಒಟ್ಟು 4 ಕೋಟಿ ರೂಗಳ ವಿವಿಧಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಗಳು.

ನಾಳೆ ಮಾನ್ಯ ಸಚಿವ ಸಂತೋಷ ಲಾಡ್ ಅವರಿಂದ ಒಟ್ಟು 4 ಕೋಟಿ ರೂಗಳ ವಿವಿಧಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಗಳು.



Author : Vinayak M Bhat

ಮಾನ್ಯ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಂದ ಸನ್ಮಾನ್ಯ ಮುಖ್ಯ ಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ತುಮರಿಕೊಪ್ಪ ವ ರಂಗಾಪುರ ಗ್ರಾಮಗಳ 90 ಲಕ್ಷ ರೂ ಅನುದಾನದಲ್ಲಿ ಸಿ ಸಿ ರಸ್ತೆ ನಿರ್ಮಾಣ, ಅರೆಬಸನಕೊಪ್ಪದಿಂದ ಬಿ. ಶೀಗಿಗಟ್ಟಿ ತಾಂಡಾದವರೆಗೆ 2ಕೊ.60ಲಕ್ಷರೂ ವೆಚ್ಚದಲ್ಲಿ ಸಿ ಸಿ ರಸ್ತೆ, ಹಾಗೂ ಬಿ ಶೀಗಿಗಟ್ಟಿ ತಾಂಡಾದ ವ್ಯಾಪ್ತಿಯಲ್ಲಿ ಎಸ್ ಸಿ ಪಿ ಯೋಜನೆಯಡಿ 50ಲಕ್ಷ ರೂ ಗಳ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸುವರು, ಇದೇ ಸಂಧರ್ಭದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತಪ್ರಭು ಚೆನ್ನಪ್ಪ ಮಾಯ್ಕರ ಇವರ ಮನೆಗೆ ತೆರಳಿ ಸಾಂತ್ವನ ಹೇಳುವದು ಮತ್ತು ಪರಿಹಾರದ ಚೆಕ್ ವಿತರಿಸುವದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.