Image
Breaking News
• ಗೌರಿ ಗಣೇಶ ಹಬ್ಬದ ಶಾಂತಿಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿ.ಸಿ ಪಿ ಐ ಶ್ರೀ ಶೈಲ ಕೌಜಲಗಿ ಯವರಿಂದ ಕಾನೂನಿನ ಎಚ್ಚರಿಕೆ, ಶಾಂತಿಯ ಉಪದೇಶ. • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ • ಶರಣರ ಮಾರ್ಗದಲ್ಲಿ ನಡೆಯಿರಿ : ಡಾ ಸಿ. ಸೋಮಶೇಖರ
11 Sep 2026 | 
ವಿಶೇಷ ಜಾಗೃತಿ ಅಭಿಯಾನ ಆ.15ರಿಂದ ಸೆ. 15ರ ವರೆಗೆ :ಪರಶುರಾಮ್ ಸಾವಂತ.

ವಿಶೇಷ ಜಾಗೃತಿ ಅಭಿಯಾನ ಆ.15ರಿಂದ ಸೆ. 15ರ ವರೆಗೆ :ಪರಶುರಾಮ್ ಸಾವಂತ.



Author : Vinayak M Bhat

ವಿಬಿಜಿ ರಾಮ್ ಜಿ ಯೋಜನೆಯಡಿ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಲಘಟಗಿ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ್ ಸಾವಂತ ಹೇಳಿದರು.

ತಾಲೂಕಿನ ಜಿ ಬಸವನಕೊಪ್ಪ ಗ್ರಾಮದಲ್ಲಿ ಪ್ರಚಾರ ಕೈಗೊಂಡು ಈ ಅವಧಿಯಲ್ಲಿಮನೆ,ಮನೆಗೆ ಭೇಟಿ, ಹೊಸ ಜಾಬ್ ಕಾರ್ಡ್ ವಿತರಣೆ,ಇ ಕೆ ವೈ ಸಿ ಜಾಬ್ ಕಾರ್ಡ್ ನವೀಕರಣ ಸೇರಿದಂತೆ ಗ್ರಾಮೀಣ ಮಟ್ಟದಲ್ಲಿ  ಸಭೆಗಳನ್ನು ಮಾಡಿ ಕಾಮಗಾರಿ ಗುರುತಿಸುವಿಕೆ ಪೋಸ್ಟರ್ ಮತ್ತು ಬ್ಯಾನರ್ ಮುಲಕ ಪ್ರಚಾರ ಮಾಡುವುದು ಇತ್ಯಾದಿ ಕಾರ್ಯಕ್ರಮ ಆಯೋಜಿಸಲಾಗಿದೆ, ಆದರಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ರೈತರು  ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಂಡು ಈ ಜಾಗೃತಿ ಅಭಿಯಾನದ  ಯೋಜನೆ ಯಶಸ್ವಿಗೊಳಿಸಲು ಕರೆ ನೀಡಿದರು.

ಈ ಸಂಧರ್ಭ ದಲ್ಲಿ ಯೋಜನೆ ಸಹಾಯಕ ನಿರ್ದೇಶಕ ಗಿರೀಶ ಕೋರಿ, ಐ ಇ ಸಿ ಸಂಯೋಜಕ ಎಸ್ ದಿವಾಕರ,ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ.ಏನ್ ಆರ್ ಎಲ್ ಎಂ ಸಿಬ್ಬಂದಿ,ಬಿ ಎಫ್ ಟಿ ಗಳು ಕಾಯಕ ಬಂಧುಗಳು ಕಾಯಕಮಿತ್ರರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಅಭಿಯಾನ ಯಶಸ್ವಿ ಗೊಳಿಸಲು ಹೇಳಿದರು.