Image
Breaking News
• 28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ • ಬೇಲಿಯೇ ಎದ್ದು ಹೊಲ ಮೇದಂತಾಗಿದೆ :ನಾಗರಾಜ ಛಬ್ಬಿ. • ಮಹಿಳೆಯರು ಕೃಷಿ ಕ್ಷೇತ್ರದ ಆಧಾರ :ಗಣಪತಿ ಹೆಗಡೆ.
01 Jun 2026 | 
28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ

28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ



Author : Vinayak M Bhat

ಮನುಷ್ಯ ಬದಲಾಗದಿದ್ದರೂ ಮನುಷ್ಯನ ಜೀವನದ ವ್ಯವಸ್ಥೆಗಳಲ್ಲಿ ನೂರಾರು ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದೇವೆ. ಆಹಾರ ಸೇರಿದಂತೆ ವಾಹನದ ವ್ಯವಸ್ಥೆಗಳು, ಅಡುಗೆಯಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ(LPG), ಅನಿಲದ ಬಳಕೆ ಹಿಂತಿರುಗಿ ನೋಡದಂತೆ ಅಡುಗೆ ಮನೆ ಪ್ರವೇಶಿಸಿ ನಮ್ಮನ್ನು ಅವರಿಸಿಕೊಂಡು ಬಿಟ್ಟಿದೆ. ಇದರಿಂದಾಗುವ ಅನಾಹುತಗಳನ್ನು ಆಗಾಗ ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ನೋಡಿ ಮರಗುತ್ತೇವೆ ಅಷ್ಟೇ. ಶಹರಗಳಿಲ್ಲದೆ ಹಳ್ಳಿಗಳು ಬದುಕಬಹುದು, ಆದರೆ ಹಳ್ಳಿಗಳಿಲ್ಲದೆ ಶಹರಗಳು ಬದುಕಲು ಸಾಧ್ಯವಿಲ್ಲ. ಈ ಚಿತ್ರ ನೋಡಿರಿ.. ಇದು ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದ ನೀಲವ್ವ ಪುಟ್ಟಪ್ಪನವರ ಕುಟುಂಬ ಮಕ್ಕಳು ಸೇರಿ 10  ಸದಸ್ಯರ ಕುಟುಂಬ ಮತ್ತು ಕೃಷಿ ಜಮೀನು ಹೊಂದಿರುವ ಇವರ ಮನೆಯಲ್ಲಿ ಇಂದಿಗೂ 3 ಜರ್ಸಿ ತಳಿಯ 3 ಹಸುಗಳಿವೆ. 28 ವರ್ಷಗಳಿಂದಲೂ ಚಿಕ್ಕ ಗೊಬ್ಬರ ಗ್ಯಾಸ್ ಹೊಂದಿರುವ ಈ ಕುಟುಂಬ ಇಂದಿಗೂ ತಮ್ಮ ಮನೆಗೆ ಸಾಕಾಗುವಷ್ಟು ಗ್ಯಾಸ್ ಉತ್ಪತ್ತಿಯನ್ನು ಮಾಡಿಕೊಂಡು ಬಂದಿದ್ದಾರೆ. ಇವರಿಗೆ ಹಾರ್ಮೋಜ್ ಜಲಸಂಧಿಯಲ್ಲಿ ಹಡಗುಗಳು ನಿಂತರೂ ಅಷ್ಟೇ ಬರದಿದ್ದರೂ ಅಷ್ಟೇ. ಮನೆಯಲ್ಲಿ ಸ್ವತಃ ಅಡುಗೆ ಅನಿಲವನ್ನು ಹೊಂದಿದ್ದಾರೆ. ನಾವು ಎಷ್ಟೇ ಕಲಿತರು ಆಹಾರವಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತ ಕುಟುಂಬವು ಪಶು ಸಂಪತ್ತನ್ನು ಹೊಂದಿದ್ದಾರೆ.


 

    ಈ ದಿಸೆಯಲ್ಲಿ ಇಂದಿನ ಸಂಧಿಗ್ದ ಪರಿಸ್ಥಿತಿಯಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಗಳಲ್ಲಿ ಇಂತವುಗಳನ್ನ ಅಳವಡಿಸಿ ರೈತರಿಗೆ ಮನದಟ್ಟು ಮಾಡಿದಲ್ಲಿ ಪ್ರತಿಯೊಬ್ಬ ರೈತನು ತನ್ನ ಮನೆಗೆ ಬೇಕಾಗುವಷ್ಟು ಅನಿಲವನ್ನು ಉತ್ಪಾದಿಸಲು ಸಾಧ್ಯವಿದೆ. ಮುಂಬರುವ ದಿನಗಳಲ್ಲಿ ವಿ ಬಿ ಜಿ ರಾಮ್ ಜಿ (ಹಿಂದಿನ ನರೇಗಾ)ಯೋಜನೆಯಲ್ಲಿ ಇಂತಹ ಚಟುವಟಿಕೆಗಳನ್ನು ಅಳವಡಿಸಿದಲ್ಲಿ ಸಾವಿರಾರು ಕೋಟಿ ವಿದೇಶಿ ವಿನಿಮಯ ಉಳಿಸುವುದರೊಂದಿಗೆ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಇಂತಹ ಕುಟುಂಬಕ್ಕೆ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು. ಅಗ ಇತರರು ಇದನ್ನು ಅರಿತುಗೊಳ್ಳಲು ಸಾಧ್ಯ.