Image
Breaking News
• 28 ವರ್ಷಗಳಿಂದ  ಗೋಬರ್ ಗ್ಯಾಸ್ ನಿಂದಲೇ ಅಡುಗೆ • ಬೇಲಿಯೇ ಎದ್ದು ಹೊಲ ಮೇದಂತಾಗಿದೆ :ನಾಗರಾಜ ಛಬ್ಬಿ. • ಮಹಿಳೆಯರು ಕೃಷಿ ಕ್ಷೇತ್ರದ ಆಧಾರ :ಗಣಪತಿ ಹೆಗಡೆ.
01 Jun 2026 | 
ಮಹಿಳೆಯರು ಕೃಷಿ ಕ್ಷೇತ್ರದ ಆಧಾರ :ಗಣಪತಿ ಹೆಗಡೆ.

ಮಹಿಳೆಯರು ಕೃಷಿ ಕ್ಷೇತ್ರದ ಆಧಾರ :ಗಣಪತಿ ಹೆಗಡೆ.



Author : Vinayak M Bhat

ಆದಿಕಾಲದಿಂದಲೂ ಮಹಿಳೆಯರು ಕೃಷಿ ಕ್ಷೇತ್ರದ ಮೂಲ ಆಧಾರ ಎಂದು ಮನುವಿಕಾಸ ಸಂಸ್ಥೆಯ ಗಣಪತಿ ಹೆಗಡೆ ಹೇಳಿದರು.

ತಾಲೂಕಿನ ದುಮ್ಮವಾಡ ಗ್ರಾಮದ ಸಿದ್ಧಾರೂಢ ಮಠದಲ್ಲಿ ಮನೋವಿಕಾಸ ಸಂಸ್ಥೆ ಕರ್ಜಗಿ ವತಿಯಿಂದ ಮಹಿಳೆಯರಿಗೆ ಕೈ ತೋಟ ನಿರ್ವಹಣಾ ತರಬೇತಿಯಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದರು. ಮನುಷ್ಯ ಜೀವನಕ್ಕೆ ತರಕಾರಿಗಳು ಆಹಾರದ ಪ್ರಮುಖ ಅಂಗ,ಇದರ ನಿರ್ವಹಣೆ ಮಹಿಳೆಯರಿಂದಲೇ ಅನ್ನುವದು ವಾಸ್ತವ ಎಂದರು. ಸಂಪನ್ಮೂಲ ವ್ಯಕ್ತಿ ಧಾರವಾಡದ ಕೃಷಿ ವಿಜ್ಞಾನ, ಗೃಹ ವಿಜ್ಞಾನ ವಿಭಾಗದ ವಿದ್ಯಾ ಸಣ್ಣನವರ್ ಮಾತನಾಡಿ ಇಂದಿನ ಆಹಾರ ಪದ್ಧತಿಯಿಂದ ಮಾನವನಲ್ಲಿ ಅಪೌಷ್ಟಿತಿಕತೆ ಹೆಚ್ಚುತ್ತಿದೆ, ಸಾವಯವ ಕೈತೋಟದ ಕೃಷಿಯಿಂದ ಅರೋಗ್ಯ, ಹಾಗೂ ಆರ್ಥಿಕ ಸ್ವಾವಲಂಬನೆ ಹೊಂದಬಹುದು ಎಂದರು. ಸುನೀಲ ಪೂಜಾರ ಮಾತನಾಡಿದರು.

ಗಳಗಿ ಹುಲಕೊಪ್ಪ, ದುಮ್ಮವಾಡ, ಬೋಗೇನಾಗರಾಕೊಪ್ಪ, ಜಿ. ಬಸನಕೊಪ್ಪ, ಬಿ. ಗುಡಿಹಾಳ, ಹಿರೇಹೊನ್ನಿಹಳ್ಳಿ ಗ್ರಾಮಗಳಿಂದ 75ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಲಾಭ ಪಡೆದರು, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು, ಗೀತಾ ನೀಲೆಕಣಿ ನಿರೂಪಿಸಿದರು.