ಸಾಧ್ಯವಾದಷ್ಟು ವಲಸೆ ತಡೆಯುತ್ತೆವೆ :ಪರುಶುರಾಮ ಸಾವಂತ.
Author : Vinayak M Bhat
ಸಾಧ್ಯವಾದಷ್ಟು ಕೂಲಿಕಾರರು ವಲಸೆ ಹೋಗುವುದನ್ನು ತಡೆಯುತ್ತೇವೆ ಎಂದು ತಾಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರುಶುರಾಮ. ವೈ. ಸಾವಂತ ಹೇಳಿದರು.
ತಾಲೂಕಿನ ಸಂಗಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡ ಕೆರೆಯಲ್ಲಿ ಹೂಳು ತೆಗೆಯುವ ಸಂಧರ್ಭದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಗಳು ಬದಲಾವಣೆ ಆಗುವದು ಸಹಜ, ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಸಮಾಜದ, ದೇಶದ ಅಭಿವೃದ್ಧಿಗೆ ಶ್ರಮಿಸುತ್ತ ಇರುತ್ತವೆ. ಈ ಹಿಂದೆ ಕೇಂದ್ರ ಸರಕಾರವು ನರೇಗಾ ಯೋಜನೆಯನ್ನು ಅನುಷ್ಠಾನಿಸಿ ಗ್ರಾಮಗಳ ವ್ಯವಸ್ಥೆಗಳನ್ನು ಗಮನಾರ್ಹವಾಗಿ ಬದಲಾಯಿಸಿದೆ, ಮುಂದುವರೆದ ಭಾಗವಾಗಿ ಕೇಂದ್ರ ಸರಕಾರವು ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ತರುತ್ತಿದೆ, ಜಿ ರಾಮ್ ಜಿ ಎಂದು ನಾಮಕರಣ ಮಾಡಿದೆ,ಹೀಗಾಗಿ ಯೋಜನೆ ಗಳ ರೂಪುರೇಷೆಗಳು ಬರಲು ಸ್ವಲ್ಪ ವಿಳಂಬ ಆಗಿದೆ, ಕೂಲಿಕಾರರಿಗೆ ತೊಂದರೆ ಆಗದಂತೆ ಗ್ರಾಮಗಳಿಗೆ ಭೇಟಿ ನೀಡಿ ಕೂಲಿಕಾರರಿಗೆ ಕೂಲಿ ಸಿಗಲು ನಮ್ಮ ಎಲ್ಲಾ ಸಿಬ್ಬಂದಿ ಪ್ರಯತ್ನ ಮಾಡುತ್ತಾ ಇದ್ದೇವೆ. ಸಧ್ಯಕ್ಕೆ ಹಳೆ ಮಾನದಂಡದ ಕೂಲಿ ನೀಡುತ್ತಿದ್ದೇವೆ, ಸ್ವಲ್ಪ ವಿಳಂಬ ಆಗಬಹುದು,ಬಿಸಿಲು ತುಂಬಾ ಇದೇ, ಅರೋಗ್ಯವಾದ ನೀರು ಸೇವಿಸಿರಿ ಸ್ಥಳದಲ್ಲಿ ನೆರಳು ನೀರು ವ್ಯವಸ್ಥೆ ಇರಲೇಬೇಕು ಎಂದರು.45ಕ್ಕೂ ಹೆಚ್ಚು ಕೂಲಿಕಾರರು ಹೂಳು ತೆಗೆಯುವ ಕೆಲಸಕ್ಕೆ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಗಿರೀಶ ಕೋರಿ, ಪಿಡಿಒ ಸವಿತಾ ಕಬ್ಬೇರ,ಐಇಸಿ ಸಂಯೋಜಕ ಎಸ್ ದಿವಾಕರ, ಬಿ ಎಫ್ ಟಿ ಲೋಕೇಶ್ ಗೋದ್ರಿ ಸ್ಥಳದಲ್ಲಿದ್ದು ಕೂಲಿ ಕಾರ್ಮಿಕರಿಗೆ ಮಾರ್ಗದರ್ಶನ ಮಾಡಿದರು.














