ರೈತರು ಸ್ವಾವಲಂಬಿಯಾಗಿ ಬದುಕಲು ಕೃಷಿ ಆಧುನಿಕರಣ ಹಾಗೂ ಆಹಾರ ಭದ್ರತೆ ಕಾಯ್ದೆ ರೂಪಿಸಿದವರು ಜಗಜೀವನ ರಾಮ್: ತಹಸೀಲ್ದಾರ ಬಸವರಾಜ ಹೊಂಕಣದವರ
Author : Vinayak M Bhat
ಕಲಘಟಗಿ: ಅಮೇರಿಕ ದೇಶದಿಂದ ಗೋಧಿ ರಫ್ತು ಆಗುತ್ತಿರುವ ಸಂಧರ್ಭದಲ್ಲಿ ಬಾಬು ಜಗಜೀವನ ರಾಮ್ ನಮ್ಮ ದೇಶದಲ್ಲೆ ಆಹಾರ ದಾನ್ಯ ಉತ್ಪಾದಿಸಿ ರೈತರು ಸ್ವಾವಲಂಬಿಯಾಗಿ ಬದುಕಲು ಕೃಷಿ ಆಧುನಿಕರಣ ಹಾಗೂ ಆಹಾರ ಭದ್ರತೆ ಕಾಯ್ದೆ ರೂಪಿಸಲು ಶ್ರಮಿಸಿದವರು ಎಂದು ತಹಸೀಲ್ದಾರ ಬಸವರಾಜ ಹೊಂಕಣದವರ ತಿಳಿಸಿದರು.
ಪಟ್ಟಣದ ನೌಕರ ಭವನದಲ್ಲಿ ತಾಲ್ಲೂಕ ಆಡಳಿತ, ತಾಲ್ಲೂಕ ಪಂಚಾಯತಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಭಾನುವಾರ ಬಾಬು ಜಗಜೀವನ ರಾಮ್ ರವರ 119 ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಮಾತನಾಡಿ ಜಗಜೀವನ ರಾಮ್ ಅವರು ಕಿರಿಯ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿ ಹಿಂದುಳಿದ,ಬಡವರ,ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಿದವರು. ಕೃಷಿ ಸಚಿವರಾಗಿ
ರೈತಪರ ಕೆಲಸ ನಿರ್ವಹಿಸಿದ್ದಾರೆ ಎಂದರು.
ಧಾರವಾಡದ ಜೆಎಸ್ಎಸ್ ಕಾಲೇಜಿನ ಉಪನ್ಯಾಸಕ ಸದಾಶಿವ ನಡುವಿನಕೇರಿ ಅವರು ಉಪನ್ಯಾಸ ನೀಡುತ್ತಾ ರಸಗೊಬ್ಬರ, ನದಿಗಳ ಮೂಲಕ ನೀರಾವರಿ ಸೌಲಭ್ಯ ಅಭಿವೃದ್ಧಿ ಪಡಿಸುವ ಮೂಲಕ ರೈತರು ಸ್ವಾವಲಂಬಿಯಾಗಿ ಬದುಕಲ ಅನುಕೂಲ ಕಲ್ಪಿಸಿದ್ದಾರೆ ಅಂತಹ ಮಹಾನ ನಾಯಕರ ತತ್ವ ಆದರ್ಶ ಅಳವಡಿಸಿಕೊಂಡು ಎಲ್ಲರೂ ತಮ್ಮ ಮಕ್ಕಳಿಗೆ ದುಶ್ಚಟಗಳಿಂದ ದೂರಮಾಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಬು ಜಗನಜೀವನ ರಾಮ್ ಅವರ ಭಾವಚಿತ್ರ ವಿವಿಧ ಕಾಲ ತಂಡಗಳೊಂದಿಗೆ ಮೆರವಣಿಗೆ ನಡೆಸಿದರು.
ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳ ಸನ್ಮಾನಿಸಿದರು.
ತಾಲ್ಲೂಕ ಪಂಚಾಯತಿ ಇಒ ಪರಶುರಾಮ ಸಾವಂತ, ಸಚಿವ ಸಂತೋಷ್ ಲಾಡ್ ರವರ ಆಪ್ತ ಕಾರ್ಯದರ್ಶಿ ಸೋಮಶೇಖರ್ ಬೆನ್ನೂರ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅನುಷಾ ಹಿರೇಮಠ, ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ.ಬಿ,ಬಸವರಾಜ ಭಾವಕರ, ಮಹೇಶ ಅಲಗೂರ, ಮಾಲಾ ತುರೀಹಾಳ,ಶಿವಾನಂದ ಚಿಕ್ಕನರ್ತಿ,ಶಿವಾಜಿ ವಾಗ್ನೋಡೆ ,ಬಸವರಾಜ ಹರಿಜನ,ಯಲ್ಲಪ್ಪ ಮೇಲಿನಮನಿ, ನಾಗೇಶ ಇಟಗಿ,ಶಶಿಕುಮಾರ್ ಕಟ್ಟಿಮನಿ, ಹನುಮಂತ ಹರಿಜನ, ಇದ್ದರು.














