16 ವರ್ಷದೊಳಗಿನ ಮಕ್ಕಳಲ್ಲಿ ಕ್ಯಾನ್ಸರ್ ಕಂಡು ಬಂದಲ್ಲಿ ಗುಣ ಪಡಿಸಲು ಸಾಧ್ಯ.
Author : Vinayak M Bhat
ಕರ್ಮ ಭೂಮಿ ಯಿಂದ ಜನ್ಮ ಭೂಮಿವರೆಗೆ ಪ್ರತಿ ದಿನ 42 ಕೀ.ಮೀ ಓಟ
ಮುಂಬೈಯಿಂದ ಮಂಗಳೂರವರೆಗೆ 950 ಕೀ.ಮೀ ಓಟ
ವಿಶೇಷ ವರದಿ
ವಿನಾಯಕ ಭಟ್ ಹುಲ್ಲಂಬಿ
ಮನುಷ್ಯ ಜೀವಿ ಯಾವಾಗಲೂ ಪ್ರಯತ್ನವಾದಿ. ತೇನ್ಸಿಂಗ ಎವರೆಸ್ಟ ಏರಿದ್ದು, ಚಂದ್ರಯಾನ ಮಾಡಿದ್ದು, ಉಪಗ್ರಹಗಳನ್ನು ಕಂಡು ಹಿಡಿದಿದ್ದು, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲೊಂದು ತಂಡ ಮುಂಬೈಯಿಂದ ಮಂಗಳೂರವರೆಗೆ ಅದಕ್ಕೆ ಕರ್ಮ ಭೂಮಿಯಿಂದ ಜನ್ಮ ಭೂಮಿವರೆಗೆ ಎಂಬ ಶೀರ್ಷೀಕೆಯಡಿ 950 ಕೀ.ಮೀ ಓಟದ ಕಾರ್ಯ ಕೈಗೊಂಡಿದ್ದಾರೆ. 16 ವರ್ಷದ ಒಳಗಿನ ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದಲ್ಲಿ ಗುಣಪಡಿಸಲು ಸಾಧ್ಯ ಎಂಬ ಉದ್ದೇಶವನ್ನಿಟ್ಟುಕೊಂಡು, ಫೆಬ್ರವರಿ 14 ದಂದು ಈ ಓಟವನ್ನು ಪ್ರಾರಂಭಿಸಿ ಇದೇ ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಇದನ್ನು ಮಂಗಳೂರಿನ ಪುರಸಭೆಯ ಟೌನ್ಹಾಲ್ನಲ್ಲಿ ಕೊನೆಗೊಳಿಸಲಿದ್ದಾರೆ. ಈ ತಂಡದಲ್ಲಿ ದಂಪತಿಗಳಾದ ರೇಶ್ಮಾ ಶೆಟ್ಟಿ, ಗಿರೀಶ್ ಶೆಟ್ಟಿ, ಕೋಚರ್ ಆದ ಹರಿದಾಸನ ನಾಯರ ಮತ್ತು ಕುಮಾರ ಅಜ್ವಾನಿ 4 ಜನರಿದ್ದಾರೆ. ಓಟದ ಮಧ್ಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಹತ್ತಿರ ವರದಿಗಾರನೊಂದಿಗೆ ಮಾತನಾಡಿದ ರೇಶ್ಮಾ ಶೆಟ್ಟಿ ಕ್ಯಾನ್ಸರ್ ಎಂಬುವುದು ಭಯದ ಖಾಯಿಲೆಯಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಕ್ಕಲ್ಲಿ ಗುಣಪಡಿಸಲು ಸಾಧ್ಯ. ಈಗಾಗಲೇ ಭಾರತ ದೇಶದಲ್ಲಿ 4 ಉಪಶಮನ ಕೇಂದ್ರಗಳಿದ್ದು 5 ನೇದ್ದು, ಮಂಗಳೂರಿನ ಮುಡಿಪ್ಪು ಎಂಬಲ್ಲಿ ದಿನಾಂಕ ಏಪ್ರಿಲ್ 08 ರಂದು ಪ್ರಾರಂಭವಾಗುತ್ತಿದ್ದು, ಎಲ್ಲರಿಗೂ ಸಂತೋಷದ ವಿಷಯ. ಅನೇಕ ಕುಟುಂಬಗಳು ಈ ಖಾಯಿಲೆಯ ವೆಚ್ಚವನ್ನು ಭರಿಸಲು ಅಶಕ್ತರಿರುತ್ತಾರೆ. ಈ ಓಟದಿಂದ ಬರುವ ದೇಣಿಗೆಗಳನ್ನು ತಪಸ್ಯ ಫೌಂಡೇಶನ್ ನೀಡುತ್ತಿದ್ದೇವೆ. ಆದ್ದರಿಂದ ಈ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ನಾನು (ರೇಶ್ಮಾ ಶೆಟ್ಟಿ)ಹಾಗೂ ಗಿರೀಶ್ ಶೆಟ್ಟಿ ದಂಪತಿಗಳಾಗಿದ್ದು, ಭಾರತ ದೇಶದ ಇಷ್ಟು ದೂರದ ದಾರಿಯನ್ನು ಓಡಿ ವರ್ಡ ರೆಕಾರ್ಡಗೆ ಪ್ರಥಮ ದಂಪತಿ ಎಂದು ದಾಖಲಾಗುತ್ತಿದ್ದೇವೆ. ಭಾರತ ದೇಶವು ಈ ರೋಗದಿಂದ ಮುಕ್ತವಾಗಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ಈ ಓಟಕ್ಕೆ ಪ್ರೋತ್ಸಾಹಿಸಿದ ಐ ಡಿ ಎಫ್ ಸಿ ಫಸ್ಟ ಬ್ಯಾಂಕ್ ಮತ್ತು ಪಂಜುರ್ಲಿ ಗ್ರೂಪ್ಸ್ (ಹೋಟೇಲ್) , ಓಝೋನ್ ಗ್ರೂಪ್ ಇದರ ಮಾಲೀಕತ್ವದ ರತ್ನಾಕರ್ ಶೆಟ್ಟಿ ಹಾಗೂ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.
ಹೆಚ್ಚಿನ ವಿವರಗಳಿಗಾಗಿ – ಜಯರಾಂ ಶೆಟ್ಟಿ 9821054074 ಸಂಪರ್ಕಿಸಲು ಕೋರಿದ್ದಾರೆ.














