Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಬಲಿ ಪಡೆಯುತ್ತಿರುವ ಕಲಘಟಗಿ ರಾಷ್ಟ್ರೀಯ ಹೆದ್ದಾರಿ(63)

ಬಲಿ ಪಡೆಯುತ್ತಿರುವ ಕಲಘಟಗಿ ರಾಷ್ಟ್ರೀಯ ಹೆದ್ದಾರಿ(63)



Author : Vinayak M Bhat

 

 ಕಲಘಟಗಿಯ ಅನೇಕ ವರದಿಗಾರರು ಸಂಯುಕ್ತ ಕರ್ನಾಟಕ ವಿಜಯವಾಣಿ ವಿಜಯ ಕರ್ನಾಟಕ ಉದಯ ಕಾಲ ಪಬ್ಲಿಕ್ ನೆಕ್ಸ್ಟ್ ಸೇರಿದಂತೆ ಇಲ್ಲಿಯ ಈ ಹೆದ್ದಾರಿಯ ಅವ್ಯವಸ್ಥೆಯ ಕುರಿತು ವರದಿ ಮಾಡುತ್ತಲೇ ಇದ್ದಾರೆ. ಅನೇಕ ಕಡೆಗಳಲ್ಲಿ ಸೂಚನಾ ಬೋರ್ಡ್, ವೇಗ ನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಅಧಿಕಾರಿಗಳು ಕಿಂಚಿತ್ತು ಕ್ರಮ ಕೈಗೊಂಡಿಲ್ಲ. ಧಾರವಾಡ ಕ್ರಾಸ್ ನಿಂದ ರಾಮನಾಳ (ರಾವಣ)  ಕ್ರಾಸ್ ವರೆಗೆ ಡೇಂಜರ್  ಝೋನ್ ಅಲ್ಲಿ ಇದೆ. ಮೇಲಿಂದ ಮೇಲೆ ಅನಾಹುತಗಳು ಸಂಭವಿಸುತ್ತಲೇ ಇವೆ. 
 

   ಇಂದು ಬೆಳಿಗ್ಗೆ ಕಲಘಟಗಿ ಹತ್ತಿರ ಇದೇ ಹೆದ್ದಾರಿಯ ತಡಸ ಕ್ರಾಸ್ ಬಳಿ  ಲಾರಿಯು ಟಾಟಾ ಏಸ್ ಗೆ ಹಿಂಬದಿಯಿಂದ ಡಿಕ್ಕಿ ಸಂಭವಿಸಿ ಜಿನ್ನೂರು  ಗ್ರಾಮದ ಬಸಮ್ಮ ವಾಲಿಕಾರ್ ಎಂಬ ಮಹಿಳೆ  ಸ್ಥಳದಲ್ಲೇ ಸಾವನಪ್ಪಿದ್ದಾರೆ. 6 ಕ್ಕೂ ಹೆಚ್ಚು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಂಭೀರ ಗಾಯಗೊಂಡ ಜನರನ್ನ ಹೆಚ್ಚಿನ ಚಿಕಿತ್ಸೆಗಾಗಿ ಕಲಘಟಗಿ ತಾಲೂಕ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ. 
 

     ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ್ ಕೌಜಲಗಿ,ಪಿಎಸ್ಐ ಬಸವರಾಜ ಯದ್ದಲಗುಡ್ಡ, ಲೋಕೇಶ್ ಬೆಂಡಿಕಾಯಿ, ಮಾಂತೇಶ ನಾನಗೌಡ, ನಾಗರಾಜ ಹೊಸಕೇರಿ, ಎಸ್ ಎಸ್ ಧಾರವಾಡ, ಅಭಿನಂದನ ಮಾದಪ್ಪನವರ, ಪ್ರಕಾಶ್ ಗುಳಪ್ಪಗೌಡರ, ಗೋಪಾಲ ಪಿರಗಿ  ಹಾಗೂ ಕಲಘಟಗಿ  ಅಗ್ನಿಶಾಮಕದಳದ ಹುಬ್ಬಳ್ಳಿಯ ಚಂದ್ರಶೇಖರ್ ಪಿ ಭಂಡಾರಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಶೋಕ್ ವಡ್ಡರ್ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ರಕ್ಷಿಸುವಲ್ಲಿ ಕ್ರಮ ಕೈಗೊಂಡಿದ್ದಾರೆ. 
 

       
 

     ಈ ಕೆಳಗಿನ ಚಿತ್ರ ಕಲಘಟಗಿಯಿಂದ 3-4 ಕೀ. ಮೀ ಇದ್ದು ಒಂದು ದಾರಿ ಧಾರವಾಡಕ್ಕೆ, ಇನ್ನೊಂದು ದಾರಿ ಹುಬ್ಬಳ್ಳಿಗೆ, ಯಾಮಾರಿದರೆ ವೈಕುಂಠಕ್ಕೆ? ಎನ್ನುವ ಪ್ರಶ್ನೆ ಸಾರ್ವಜನಿಕರದು. ಈ ಕುರಿತು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.


 

    ಈ ಕುರಿತು ಇಷ್ಟೊಂದು ನಿಷ್ಕಾಳಜಿ ಅಲಸ್ಯ ತಾತ್ಸಾರ ಏಕೆ? ಪ್ರತಿ ವಿಷಯಕ್ಕೂ ಸಮಸ್ಯೆಗೂ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಡಾ ಮಹೇಶ್ ತಿಪ್ಪಣ್ಣವರ್, ರಾಜೇಂದ್ರ ಪಾಲ್ಕರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.